ಬಸವಕಲ್ಯಾಣ: ರಾಮನ ಮೂರ್ತಿಯ ತೊಡೆಯ ಮೇಲೆ ನಿಂತು ಪುಷ್ಪಮಾಲೆ ಅರ್ಪಿಸಿದ ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟೀಕರಣ ನೀಡಿದ ಅವರು, ಒಂದು ವೇಳೆ ನಿಮಗೆ ಇದು ತಪ್ಪು ಎನಿಸಿದರೆ ಕ್ಷಮೆ ಕೇಳುತ್ತೇನೆ. ನಾನೂ ಅಪ್ಪಟ ರಾಮ ಭಕ್ತ, ಹಿಂದೂ ಕಾರ್ಯಕರ್ತನಾಗಿದ್ದೇನೆ. ಶ್ರೀರಾಮನ ಮೇಲಿನ ಅತಿಯಾದ ಭಕ್ತಿ, ಪ್ರೀತಿಯ ಕಾರಣ ತೊಡೆ ಏರಿ ಪುಷ ಮಾಲೆ ಅರ್ಪಿಸಿದ್ದು ನಿಜವಾಗಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ ಸಮಿತಿ ಸದಸ್ಯರ ಅನುಮತಿ ಪಡೆದೇ ಮೇಲೇರಿ ಮಾಲೆ ಹಾಕಿ ಆರತಿ ಬೆಳಗಿದ್ದೇನೆ. ನಂತರ ಕೆಳಗೆ ಇಳಿಯುವಾಗ ತೊಡೆಗೆ ಹಣೆಹಚ್ಚಿ ನಮಸ್ಕರಿಸಿದ್ದೇನೆ. ನಮ್ಮ ಹಿತಶತ್ರುಗಳು, ಆಗದವರು ಅದನ್ನು ತೋರಿಸಿಲ್ಲ ಎಂದು ಹೇಳಿದ್ದಾರೆ.