ಬ್ಯಾರೀಸ್ ಕಲ್ಚರಲ್ ಫೋರಂನಿಂದ ಮಾರ್ಚ್ 30ರಂದು ಬ್ಯಾರಿ ಕುಟುಂಬ ಸಮ್ಮಿಲನ – ಇಫ್ತಾರ್ ಕೂಟ

Prasthutha|

ಬೆಂಗಳೂರು: ಬ್ಯಾರೀಸ್ ಕಲ್ಚರಲ್ ಫೋರಂ ಬೆಂಗಳೂರು ಸೆಂಟ್ರಲ್ ವತಿಯಿಂದ ಮಾರ್ಚ್ 30ರಂದು ಬ್ಯಾರಿ ಕುಟುಂಬ ಸಮ್ಮಿಲನ ಹಾಗೂ ಇಫ್ತಾರ್ ಕೂಟ ಏರ್ಪಡಿಸಲಾಗಿದೆ.

- Advertisement -


ಮಾರ್ಚ್ 30ರಂದು ಮಧ್ಯಾಹ್ನ 2 ಗಂಟೆಯಿಂದ 8 ಗಂಟೆಯವರೆಗೆ ರಂಜಾನ್ ಸಂಗಮ-23 ಎಂಬ ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಬೆಂಗಳೂರಿನ ಎಚ್’ಎಎಲ್ ಸಮೀಪದ ಅನ್ನಸಂದ್ರಪಾಳ್ಯದ ಇಂಡಿಯನ್ ಚರ್ಚ್ ಹಾಲ್’ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್, ಬದ್ರುದ್ದೀನ್ ಮಾಣಿ, ಹಿರಿಯ ವಕೀಲ ಮುಝಫ್ಫರ್, ಹಿರಿಯ ವಿದ್ವಾಂಸ ವಿ.ಕೆ.ಅಬ್ದುಲ್ ಖಾದರ್ ಹಾಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.


ಬೆಂಗಳೂರು ನಗರದಲ್ಲಿ ಉದ್ಯಮ, ವ್ಯಾಪಾರ, ವ್ಯವಹಾರ, ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಬ್ಯಾರಿಗಳು ದಶಕಗಳಿಂದಲೂ ಬದುಕುತ್ತಿದ್ದಾರೆ. ಆದರೆ ಅವರೆಲ್ಲರೂ ಪರಸ್ಪರ ಅಪರಿಚಿತರು. ಪರಸ್ಪರ ಸಹಕಾರ ಮತ್ತು ಸಹಯೋಗಕ್ಕಾಗಿ ಬೆಂಗಳೂರಿನ ಬ್ಯಾರಿಗಳಿಗೆ ಮುಕ್ತವಾದ ಮತ್ತು ಸೂಕ್ತವಾದ ವೇದಿಕೆಯನ್ನು ಒದಗಿಸಿಕೊಡಬೇಕು ಎಂಬ ಉದ್ದೇಶದಿಂದ “ಬ್ಯಾರಿ ಕಲ್ಚರಲ್ ಫಾರಂ” ಅನ್ನು ಸ್ಥಾಪಿಸಲಾಗಿದೆ. ಬ್ಯಾರಿ ಸಮುದಾಯವನ್ನು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಂಗಳೂರಿನಲ್ಲಿ ಪರಿಚಯಿಸಲು ಅನುಕೂಲ ಆಗುವಂತೆ ಹಲವು ವಿಭಿನ್ನ ಯೋಚನೆಗಳನ್ನು ಹೊಂದಿರುವ ಫೋರಂ, ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿಗಳ ಕುಟುಂಬಗಳ ಮಾಹಿತಿಯನ್ನು ಪಡೆಯಲು ಅವರೆಲ್ಲರನ್ನೂ ಒಂದೆಡೆ ಸೇರಿಸಬೇಕು ಎಂಬ ಉದ್ದೇಶದಿಂದ ಬ್ಯಾರಿ ಕುಟುಂಬ ಸಮ್ಮಿಲನ ಮತ್ತು ಇಫ್ತಾರ್ ಕೂಟ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.



Join Whatsapp