ಬಂಜಾರ ಮತ್ತು ದಲಿತ ಸಮುದಾಯಗಳ ಮೇಲೆ ಪೊಲೀಸ್ ದೌರ್ಜನ್ಯ: ಪ್ರಕಾಶ್ ರಾಥೋಡ್ ಕಿಡಿ

Prasthutha|

ಬೆಂಗಳೂರು: ಬಂಜಾರ ಮತ್ತು ದಲಿತ ಸಮುದಾಯಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿ ಬಂಜಾರ ಸಮುದಾಯದ ತಲೆ ಹೊಡೆದಿದೆ. ಬಿಜೆಪಿ ನಿಮ್ಮ ಒಡೆದಾಳುವ ನೀತಿಗೆ ದಲಿತ ಸಮುದಾಯಗಳ ಶಾಪ ತಟ್ಟಲಿದೆ ಎಂದು ಕೆಪಿಸಿಸಿ ವಕ್ತಾರ ಪ್ರಕಾಶ್ ರಾಥೋಡ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಂಜಾರ ಮತ್ತು ದಲಿತ ಸಮುದಾಯಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿ ಬಂಜಾರ ಸಮುದಾಯದ ತಲೆ ಹೊಡೆದಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮನೆ ಮುರುಕ ರಾಜಕಾರಣಕ್ಕೆ ಸ್ಯಾಂಪಲ್
1.ದಲಿತ ಸಹೋದರ ಜಾತಿಗಳನ್ನು ಪರಸ್ಪರರ ವಿರುದ್ಧ ಸರ್ಕಾರವೇ ಎತ್ತಿಕಟ್ಟಿದ್ದು.
2.ಲಿಂಗಾಯತ ಮತ್ತು ಒಕ್ಕಲಿಗರನ್ನು ಸಿ.ಟಿ.ರವಿ ಪರಸ್ಪರ ಎತ್ತಿ ಕಟ್ಟಿದ್ದು.
3.ಕುರುಬರು ಮತ್ತು ಮುಸ್ಲಿಮರನ್ನು ಹಾವೇರಿಯಲ್ಲಿ ಜಗಳಕಚ್ಚಿದ್ದು
4.ಈಡಿಗರು v/s ಮುಸ್ಲಿಮರನ್ನು ಕಟೀಲ್ ಕಚ್ಚಾಡಿಸಿದ್ದು
5.ಅನುಭವ ಮಂಟಪ ನೆಪದಲ್ಲಿ ಲಿಂಗಾಯತರು-ಮುಸ್ಲಿಮರನ್ನು ಕಚ್ಚಾಡಿಸಲು ಸ್ಕೆಚ್ ಹಾಕಿದ್ದು.
6.ಬಳ್ಳಾರಿಯಲ್ಲಿ ಮುಸ್ಲಿಂ-ವಾಲ್ಮೀಕಿ ಸಹೋದರರನ್ನು ಕಚ್ಚಾಡಿಸಲು ಸ್ಕೆಚ್ ಹಾಕಿದ್ದು.
ಹೀಗೆ ಹೆಜ್ಜೆ ಹೆಜ್ಜೆಗೂ ಮನೆ ಮುರುಕತನ ಪ್ರದರ್ಶಿಸಿದ ಸರ್ಕಾರ ಅಧಿಕಾರದಲ್ಲಿದ್ದು ಮಾಡಿದ್ದೇನು?
40% ಕಮಿಷನ್ ತಿಂದಿದ್ದು, ಸಂತೋಷ್ ಪಾಟೀಲ್ ಜೀವ ತಿಂದಿದ್ದು ಎಂದು ಕೆಪಿಸಿಸ ವಕ್ತಾರ ಪ್ರಕಾಶ್ ರಾಥೋಡ್ ಕಿಡಿಕಾರಿದ್ದಾರೆ.
ಮನೆಮುರುಕ ಸನಾತನಿ RSS ನ ಪಿತೂರಿ ಪಾಂಡಿತ್ಯಕ್ಕೆ ತಲೆ ಒತ್ತೆ ಇಟ್ಟಿರುವ ಬಿಜೆಪಿ ಬಂಜಾರ ಮತ್ತು ದಲಿತ ಸಮುದಾಯಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿ ಬಂಜಾರ ಸಮುದಾಯದ ತಲೆ ಹೊಡೆದಿದೆ. ಬಿಜೆಪಿ ನಿಮ್ಮ ಒಡೆದಾಳುವ ನೀತಿಗೆ ದಲಿತ ಸಮುದಾಯಗಳ ಶಾಪ ತಟ್ಟಲಿದೆ. ನೆನಪಿಡಿ. ನಿಮ್ಮ ಮನೆ ಮುರುಕ ರಾಜಕಾರಣಕ್ಕೆ ದಲಿತ ಸಹೋದರರ ಧಿಕ್ಕಾರ ಎಂದು ಟ್ವೀಟ್ ಮಾಡಿದ್ದಾರೆ.



Join Whatsapp