ರಾಯಚೂರು: ಮುಸ್ಲಿಮರಿಗೆ ನೀಡಿದ್ದ 2ಬಿ ಮೀಸಲಾತಿಯನ್ನು ರದ್ದುಪಡಿಸಿದ್ದನ್ನು ವಿರೋಧಿಸಿ ರಾಯಚೂರಿನಲ್ಲಿಂದು ಜಿಲ್ಲಾ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯ ಬಿಜೆಪಿ ಸರಕಾರವು 2ಬಿ ಮೀಸಲಾತಿ ರದ್ದುಗೊಳಿಸಿರುವುದು ಖಂಡನೀಯ. ತಕ್ಷಣ ಮುಸ್ಲಿಮರಿಗೆ 2ಬಿ ಪ್ರವರ್ಗದಲ್ಲೇ ಮೀಸಲಾತಿ ಮುಂದುರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಬಿಜೆಪಿ ಸರ್ಕಾರ ಹಾಗೂ ಬೊಮ್ಮಾಯಿ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಬಳಿಕ ಮನವಿ ಪತ್ರವನ್ನು ತಹಶೀಲ್ದಾರ್’ಗೆ ಸಲ್ಲಿಸಲಾಯಿತು.
2ಬಿ ಮೀಸಲಾತಿ ಪುನರ್ ಸ್ಥಾಪಿಸಲು ಒತ್ತಾಯಿಸಿ ರಾಯಚೂರಿನಲ್ಲಿ SDPI ಪ್ರತಿಭಟನೆ
Prasthutha|