ಅರುಣಾಚಲ ವಿಷಯವಾಗಿ ಜಿ20 ಸಭೆಯಿಂದ ದೂರ ಉಳಿದ ಚೀನಾ

Prasthutha|

ನವದೆಹಲಿ: 2023ರ ಸೆಪ್ಟೆಂಬರ್’ನಲ್ಲಿ ದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ಮೊದಲು 50 ಪ್ರಮುಖ ನಗರಗಳಲ್ಲಿ ನಡೆಸಲಿರುವ ಮಾತುಕೆಯ ಕಾನ್ಫಡೆನ್ಸಿಸಿಯಲ್ ಮೀಟಿಂಗಿನಲ್ಲಿ 50 ಪ್ರತಿನಿಧಿಗಳು ಭಾಗವಹಿಸಿದರೂ ಚೀನಾ ಗೈರು ಹಾಜರಾಯಿತು.

- Advertisement -


ಅರುಣಾಚಲ ಪ್ರದೇಶದ ರಾಜಧಾನಿ ಇಟಾ ನಗರದಲ್ಲಿ ಭಾನುವಾರ ಈ ಸಭೆ ನಡೆಯಿತು. ಅರುಣಾಚಲ ಪ್ರದೇಶವು ಟಿಬೆಟ್ ನ ಭಾಗ ಎಂಬುದು ಚೀನಾದ ವಾದವಾಗಿದೆ.
ಅಷ್ಟೇ ಅಲ್ಲ ಇಟಾನಗರದಲ್ಲಿ ಮೀಟಿಂಗ್ ಇಡುವ ಬಗ್ಗೆ ಚೀನಾವು ಭಾರತಕ್ಕೆ ಅಧಿಕೃತ ಪ್ರತಿಭಟನೆಯನ್ನೂ ಸಲ್ಲಿಸಿದೆ ಎಂದೂ ಹೇಳಲಾಗಿದೆ
ಆದರೆ ಭಾರತ, ಚೀನಾ ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳು ಈ ಬಗ್ಗೆ ಏನೂ ಹೇಳಿಲ್ಲ.


ಸಂಶೋಧನೆ ಆವಿಷ್ಕಾರ ಆರಂಭಿಕ ಕೂಡುವಿಕೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ಸಭೆ ಏರ್ಪಡಿಸಿತ್ತು.
ಭಾಗವಹಿಸಿದ ಪ್ರತಿನಿಧಿಗಳು ಅರುಣಾಚಲ ಪ್ರದೇಶದ ವಿಧಾನ ಸಭೆಗೆ ಭೇಟಿ ನೀಡಿದರು ಹಾಗೂ ಹತ್ತಿರದ ಬೌದ್ಧ ಕೇಂದ್ರಗಳನ್ನು ಸಂದರ್ಶಿಸಿದರು. ಎಲ್ಲರಿಗೂ ಸ್ಥಳೀಯ ಖಾದ್ಯಗಳೇ ಪ್ರಮುಖವಾಗಿದ್ದ ಆತಿಥ್ಯ ನೀಡಲಾಗಿದೆ.



Join Whatsapp