ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ವಿಪಕ್ಷಗಳ ಸಂಸದರು ಸಂಸತ್ತಿನ ಸಂಕೀರ್ಣಿದಲ್ಲಿ ಸೋಮವಾರ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕೊಠಡಿಯಲ್ಲಿ ಡಿಎಂಕೆ, ಸಮಾಜವಾದಿ ಪಕ್ಷ, ಜೆಡಿ (ಯು), ಬಿಆರ್ ಎಸ್,, ಸಿಪಿಐ (ಎಂ), ಸಿಬಿಐ, ಆರ್ ಜೆಡಿ, ಎನ್ ಸಿಪಿ, ಐಯುಎಂಎಲ್, ಎಂಡಿಎಂಕೆ, ಕೇರಳ ಕಾಂಗ್ರೆಸ್, ಟಿಎಂಸಿ, ಆರ್ ಎಸ್ ಪಿ, ಎಎಪಿ, ಎನ್ ಪಿ ಮತ್ತು ಶಿವಸೇನೆ (ಯುಬಿಟಿ) ಪಕ್ಷಗಳ ನಾಯಕರು ಭೇಟಿಯಾದರು. ಸಭೆ ಬಳಿಕ ರಾಹುಲ್ ಗಾಂಧಿ ಅನರ್ಹತೆಯನ್ನು ವಿರೋಧಿಸಿ ಲೋಕಸಭೆಗೆ ಕಪ್ಪು ಬಟ್ಟೆ ಧರಿಸಿ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
#WATCH | Delhi: Opposition MPs protest near Gandhi statue in Parliament, wearing black attire, over Adani Group issue.
— ANI (@ANI) March 27, 2023
Congress president-Rajya Sabha LoP Mallikarjun Kharge and UPA chairperson Sonia Gandhi also join the protest. pic.twitter.com/JSYM8luVQt