ಅಪಘಾತಕ್ಕೀಡಾದ ಕಾರಿನಲ್ಲಿ ಸಿ.ಟಿ.ರವಿ ಹೆಸರಿನ ಕ್ಯಾಲೆಂಡರ್, ಮದ್ಯ, ಲಾಂಗ್ ಪತ್ತೆ: ಸ್ಥಳೀಯರಿಂದ ಪ್ರತಿಭಟನೆ

Prasthutha|

ಚಿಕ್ಕಮಗಳೂರು: ಬ್ರೇಕ್ ಡೌನ್ ಆಗಿ ಅಪಘಾತಕ್ಕೀಡಾದ ಕಾರಿನಲ್ಲಿ ಮದ್ಯ, ಸಿ.ಟಿ.ರವಿ ಹೆಸರಿನ ಕ್ಯಾಲೆಂಡರ್, ಲಾಂಗ್ ಪತ್ತೆಯಾದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

- Advertisement -

ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್’ನಲ್ಲಿ  ತಡ ರಾತ್ರಿ ಕೆಎ 03: ಎಂಸಿ710 ನೋಂದಣಿ ಸಂಖ್ಯೆಯ ಓಮ್ನಿ ಕಾರೊಂದು ಬ್ರೇಕ್ ಡೌನ್ ಆಗಿ ಅಪಘಾತಕ್ಕೀಡಾಗಿದೆ. ತಕ್ಷಣ ಸ್ಥಳೀಯರು ನೆರವಿಗೆ ಬಂದಾಗ ಅದರ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆದಿದೆ. ಪಟ್ಟು ಬಿಡದ ಸ್ಥಳೀಯರು ಕಾರನ್ನು ತಪಾಸಣೆ ಮಾಡಿದಾಗ ಮದ್ಯ, ಲಾಂಗ್, ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಪತ್ತೆಯಾಗಿದೆ.

ಅಷ್ಟರಲ್ಲಿ ಕಾರಿನಲ್ಲಿದ್ದ ಚಾಲಕ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಸ್ಥಳೀಯರು ಮದ್ಯ, ಕ್ಯಾಲೆಂಡರ್, ಲಾಂಗ್ ಅನ್ನ ಕಾರಿನಿಂದ ಹೊರತೆಗೆದು ಪ್ರತಿಭಟನೆ ನಡೆಸಿ, ಭ್ರಷ್ಟ ಸಿ.ಟಿ.ರವಿಯನ್ನು ಬಂಧಿಸಿ, ಬಡವರಿಗೆ ಎಣ್ಣೆ ಕುಡಿಸಿ ಕೊಲ್ಲಲು ಮುಂದಾದ ಸಿ.ಟಿ.ರವಿಯನ್ನು ಬಂಧಿಸಿ ಎಂದು ಘೋಷಣೆ ಕೂಗಿದರು.

- Advertisement -

ವಿಷಯ ತಿಳಿದು ಸ್ಥಳಕ್ಕೆ ನಗರ ಠಾಣಾ ಪೊಲೀಸರು ಆಗಮಿಸಿ ಮದ್ಯ , ಕ್ಯಾಲೆಂಡರ್, ಲಾಂಗ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.  



Join Whatsapp