ಮಂಗಳೂರು: ಏಳು ದಶಕಗಳ ಚಾರಿತ್ರಿಕ ಇತಿಹಾಸದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರ್ವಾಧಿಕಾರಿ ನಡೆಯ ಬಿಜೆಪಿ ಸರಕಾರ ಸಮಾಧಿ ಕಟ್ಟುವ ಅಂತಿಮ ಪ್ರಯತ್ನಗಳು ನಡೀತಾ ಇದೆ ಕಾಲ ಇನ್ನೂ ಮಿಂಚಿಲ್ಲ. ಕಾಂಗ್ರೆಸ್ ಒಣಪ್ರತಿಷ್ಠೆ ಬದಿಗಿಟ್ಟು ಎಲ್ಲಾ ಜಾತ್ಯತೀತ ಪಕ್ಷಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂರಕ್ಷಿಸುವ ಪ್ರಾಮಾಣಿಕ ಹೋರಾಟ ಕೈಗೊಳ್ಳಬೇಕು ಎಂದು SDPI ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅನ್ವರ್ ಸಾದತ್, ಕಾಂಗ್ರೆಸ್ ತನ್ನ ಒಣಪ್ರತಿಷ್ಠೆ ಬಿಟ್ಟು ಹೋರಾಟಕ್ಕೆ ಧುಮುಕಬೇಕು ಎಂದು ಕರೆ ನೀಡಿದ್ದಾರೆ.
ಕಾಂಗ್ರೆಸ್ ಒಣಪ್ರತಿಷ್ಠೆ ಬದಿಗಿಟ್ಟು ಎಲ್ಲಾ ಜಾತ್ಯತೀತ ಪಕ್ಷಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಪ್ರಾಮಾಣಿಕ ಹೋರಾಟ ಕೈಗೊಳ್ಳಬೇಕು: SDPI
Prasthutha|