ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

Prasthutha|

ಮಂಗಳೂರು: ಸೈಂಟ್ ಅಲೋಶಿಯಸ್ ಕಾಲೇಜ್ ಮಂಗಳೂರು, ರೋಟ್ರಾಕ್ಟ್ ಕ್ಲಬ್ ಮಂಗಳೂರು ನಾರ್ತ್ –  ಅಲೋಶಿಯಸ್  ಕಾಲೇಜ್, ರೋಟ್ರಾಕ್ಟ್  ಕ್ಲಬ್ ಸಿಟಿ ಜಂಟಿ ಆಶ್ರಯದಲ್ಲಿ  ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಅಲೋಶಿಯಸ್ ಕಾಲೇಜ್’ನ ಸಭಾಂಗಣದಲ್ಲಿ  ರಕ್ತದಾನ ಶಿಬಿರ “ಮಹಾದಾನ 8.0 ” ಹಮ್ಮಿಕೊಳ್ಳಲಾಯಿತು. ರಕ್ತದಾನ ಶಿಬಿರವನ್ನು ಅಲೋಶಿಯಸ್ ಕಾಲೇಜ್’ನ ಪ್ರಾಂಶುಪಾಲರಾದ  ರೆ.ಫಾ. ಪ್ರವೀಣ್ ಮಾರ್ಟಿಸ್  ಯಸ್. ಜೆ  ಉದ್ಘಾಟಿಸಿದರು. ಸೈಂಟ್ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾಕ್ಟರ್ ಆಲ್ವಿನ್ ಡೆಸಾ, ರೋಟ್ರಾಕ್ಟ್ ಚೇರ್ಮನ್ ಪ್ರಸನ್ನ ಮಲ್ಯ, ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾಕ್ಟರ್ ಆಂಟೋನಿ, ರೋಟ್ರಾಕ್ಟ್ ಕ್ಲಬ್  ನಾರ್ತ್ ಮತ್ತು ರೋಟ್ರಾಕ್ಟ್ ಕ್ಲಬ್ ಸಿಟಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ 137 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ  ರಕ್ತದಾನ ಮಾಡಿದರು.

- Advertisement -




Join Whatsapp