ಎಸ್’ಡಿಪಿಐ ರಾಷ್ಟ್ರೀಯ ಚುನಾವಣಾ ವೀಕ್ಷಕ ದೆಹ್ಲಾನ್ ಬಾಖವಿ ಉಳ್ಳಾಲ ವಿಧಾನಸಭಾ ಕ್ಷೇತ್ರ ಚುನಾವಣಾ ಸಮಿತಿಯೊಂದಿಗೆ ಮಹತ್ವದ ಸಭೆ

Prasthutha|

ಉಳ್ಳಾಲ: ಕರ್ನಾಟಕ ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಸಮಿತಿ ಸಭೆ, SDPI ನಗರ ಸಮಿತಿ ಉಳ್ಳಾಲ ಕಚೇರಿಯಲ್ಲಿ ನಡೆಯಿತು.

- Advertisement -


ಈ ಸಭೆಗೆ ಆಗಮಿಸಿದ SDPI ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರೂ ರಾಷ್ಟ್ರೀಯ ಚುನಾವಣಾ ವೀಕ್ಷಕರೂ ಆದ ದೆಹ್ಲಾನ್ ಬಾಖವಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕೂಲಂಕಷ ವರದಿಗಳನ್ನು ಪಡೆದು ಸ್ಥಳೀಯ ಚುನಾವಣಾ ಸಮಿತಿಯೊಂದಿಗೆ ಮಹತ್ವದ ಸಭೆ ನಡೆಸಿ ಮಾತನಾಡಿದ ಅವರು, ಗೆಲ್ಲುವ ಕ್ಷೇತ್ರವೆಂದೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ SDPI ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಗೆಲ್ಲುವುದು ಶತಸಿದ್ಧ ಎಂದು ನುಡಿದರು


SDPI ರಾಷ್ಟ್ರೀಯ ಚುನಾವಣಾ ಉಸ್ತುವಾರಿ ಎನ್ ಯು ಸಲಾಂ ಜನತೆಯು SDPI ಪಕ್ಷದೊಂದಿಗಿದ್ದು ವಿಜಯದ ಮಾಲೆಯನ್ನು ಕೊರಳಿಗೆ ಹಾಕುವ ಸಂದರ್ಭ ಬಂದಿದ್ದು ಕಾರ್ಯಕರ್ತರನ್ನು ಸಜ್ಜುಗೊಳಿಸುವಂತೆ ಕರೆ ನೀಡಿದರು.
SDPI ಕರ್ನಾಟಕ ಚುನಾವಣಾ ಉಸ್ತುವಾರಿ ಆಫ್ಸರ್ ಕೂಡ್ಲಿಪೇಟೆ ಮಂಗಳೂರು ವಿಧಾನಸಭೆಯಲ್ಲಿ ನಡೆಯತ್ತಿರುವ ಪಕ್ಷದ ಚಟುವಟಿಕೆಗಳ ಮಾಹಿತಿ ಪಡೆದರು.

- Advertisement -


ಈ ಸಂದರ್ಭದಲ್ಲಿ SDPI ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ, SDPI ಮಂಗಳೂರು ವಿಧಾನಸಭಾ ಕ್ಷೇತ್ರ ರಾಜ್ಯ ಉಸ್ತುವಾರಿ ಆತಾವುಲ್ಲಾ ಜೋಕಟ್ಟೆ, SDPI ಕರ್ನಾಟಕ ಚುನಾವಣಾ ಜಂಟಿ ಉಸ್ತುವಾರಿ ನವಾಝ್ ಉಳ್ಳಾಲ್, SDPI ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ, ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಜೊತೆ ಕಾರ್ಯದರ್ಶಿ ಸಲಾಂ ವಿದ್ಯಾನಗರ, ಕೋಶಾಧಿಕಾರಿ ಲತೀಫ್ ಕೋಡಿಜಾಲ್ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.



Join Whatsapp