ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್…!
ಮಂಗಳೂರು: ನಿಮ್ಮ ಕತೆ ಮುಗಿಯಿತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಶಾಸಕ ವೇದವ್ಯಾಸ್ ಕಾಮತ್’ಗೆ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕರಾವಳಿ ಉತ್ಸವ ಮೈದಾನದಲ್ಲಿ ಗುರುವಾರ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಭಾಷಣ ಮಾಡುತ್ತಿದ್ದಾಗ ಶಾಸಕ ವೇದವ್ಯಾಸ್ ಕಾಮತ್ ಮಾತನಾಡುತ್ತಿದ್ದರು.
ಇದರಿಂದ ಸಿಟ್ಟಿಗೆದ್ದ ಸಿಎಂ ಬೊಮ್ಮಾಯಿ, ಏ ಏನಪ್ಪ, ಯಾರು ಮಾತನಾಡುವುದು, ವೇದವ್ಯಾಸ್ ನಿನ್ ಮಾತು ಮುಗಿಸಿದ ನಂತರ ನನ್ನ ಮಾತು ಪ್ರರಂಭಿಸಬೇಕಾ ಎಂದು ಕಿಡಿಕಾರಿದ್ದಾರೆ.
ಸ್ವಲ್ಪ ಸುಮ್ಮನೆ ಐದು ನಿಮಿಷ ಕುಳಿತುಕೋ, ನಿನು ಹೀಂಗೆ ಈ ಸಲ ಮುಗಿದರೆ ನಿನ್ನ ಕತೆ ಮುಗಿಯಿತು ಎಂದು ಸೂಚ್ಯವಾಗಿ ಹೇಳಿದ್ದಾರೆ.
ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಆಗುತ್ತಿದೆ.