ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕರೆದಿದ್ದ ಬಿಜೆಪಿ ಶಾಸಕರ ಸಭೆಯಲ್ಲಿ ಕಾರವಾರದ ಶಾಸಕಿ ರೂಪಾಲಿ ನಾಯಕ್ ಕಣ್ಣೀರಿಟ್ಟ ಘಟನೆ ನಡೆದಿದೆ ಎಂದು ವರದಿಯೊಂದು ತಿಳಿಸಿದೆ.
ಸಭೆಯಲ್ಲಿ ಕೆಲವು ಸಚಿವರು, “ದಯವಿಟ್ಟು ಕಣ್ಣೀರು ಹಾಕಬೇಡಿ, ಈ ವಿಚಾರ ಹೊರಗೆ ಗೊತ್ತಾದರೆ, ಸರಕಾರದ ಮಾನ ಹರಾಜಾಗುತ್ತದೆ” ಎಂದು ರೂಪಾಲಿ ನಾಯಕ್ ಅವರನ್ನು ಮನವಿ ಮಾಡಿದ್ದರು ಎನ್ನಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಆ ಐವರು ಕಾರಣ, ಹೀಗಾಗಿ ಈಶ್ವರಪ್ಪಗೆ ಸಿಎಂ ಗಾದಿ ಕೊಡಿ. ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ದೂರುಗಳಿದ್ದುದಕ್ಕೆ ಅವರನ್ನು ಅಮಾನತು ಮಾಡಿಸಲಾಗಿತ್ತು. ಆದರೆ, ಆ ಅಧಿಕಾರಿ ಪ್ರಭಾವ ಬಳಸಿ ಅಮಾನತು ರದ್ದುಪಡಿಸಿಕೊಂಡು ಮತ್ತೆ ಅದೇ ಹುದ್ದೆಗೆ ಬಂದು ಶಾಸಕಿಗೆ ಸೆಡ್ಡು ಹೊಡೆದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರೂಪಾಲಿ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಶಾಸಕರ ಮಾತಿಗೆ ಬೆಲೆ ಇಲ್ಲ, ಈ ರೀತಿಯಾದರೆ ಶಾಸಕರಿಗೆ ಕ್ಷೇತ್ರದಲ್ಲಿ ಬೆಲೆ ಏನು ಉಳಿಯಲಿದೆ? ಯಾವ ಮುಖವಿಟ್ಟುಕೊಂಡು ಓಡಾಡುವುದು? ಎಂದು ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ.
ರೂಪಾಲಿ ಅವರ ಮಾತಿಗೆ ಇತರ ಶಾಸಕರೂ ಧ್ವನಿಗೂಡಿಸಿ, ವರ್ಗಾವಣೆ ವಿಚಾರದಲ್ಲಿ ನಡೆಯುತ್ತಿರುವ ದಂಧೆಗೆ ಮೊದಲು ಕಡಿವಾಣ ಹಾಕಿ, ಶಾಸಕರ ಮರ್ಯಾದೆ ಉಳಿಸಿ ಎಂದು ಒತ್ತಾಯ ಮಾಡಿದರೆಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.