ಬೋಳಿಯಾರ್: ರಾಜ್ಯ ವಿಧಾನ ಸಭಾ ಚುನಾವಣಾ ಪ್ರಯುಕ್ತ ರಾಜಕೀಯದಲ್ಲಿ ಮಹಿಳೆಯರ ಪಾತ್ರ ವಿಷಯದ ಕುರಿತು ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ಬೋಳಿಯಾರ್’ನಲ್ಲಿ ಮಹಿಳಾ ಕಾರ್ಯಕರ್ತೆಯರ ಸಭೆ ನಡೆಯಿತು.
ಸಮಿತಿಯ ಚುನಾವಣಾ ಉಸ್ತುವಾರಿಗಳಾದ ಖೈರುನ್ನೀಸಾ ಸಿರಾಜ್ ಪಲ್ಲ ಹಾಗೂ ಝಫ್ರೀನಾ ಉಬೈದ್ ಅಮ್ಮೆಂಬಳ ಇವರ ನೇತೃತ್ವದಲ್ಲಿ ಸಭೆ ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ವಿಧಾನ ಸಭಾ (ಉಳ್ಳಾಲ) ಕ್ಷೇತ್ರ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಸಭೆಯನ್ನು ಉದ್ದೇಶಿಸಿ, ರಾಜಕೀಯದಲ್ಲಿ ಮಹಿಳೆಯರ ಪಾತ್ರ ಪ್ರಮುಖ ಪಾತ್ರ ವಹಿಸುತ್ತದೆ. ಇತಿಹಾಸದ ಕೆಲವು ನಿದರ್ಶನಗಳನ್ನು ನೀಡುವುದರ ಮೂಲಕ ಕಾರ್ಯಕರ್ತೆಯರನ್ನು ಹುರಿದುಂಬಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಮಿಸ್ರಿಯಾ ಕಣ್ಣೂರು, ಚುನಾವಣಾ ರೂಪುರೇಷೆಗಳ ಬಗ್ಗೆ ಕಾರ್ಯಕರ್ತೆಯರಿಗೆ ತರಗತಿ ನೀಡಿದರು. ಅದೇ ರೀತಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ಮುಖಂಡರಾದ ರಹಿಮಾನ್ ಬೋಳಿಯಾರ್ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮತನಾಡಿದರು.
ಕಾರ್ಯಕ್ರಮದಲ್ಲಿ ಸಫ್ನಾಝ್ ಬೋಳಿಯಾರ್ ಸ್ವಾಗತಿಸಿ ಝರೀನಾ ವಂದಿಸಿದರು.