ಹಂದಿಗಳಂತೆ ಹತ್ತಾರು ಮರಿಗಳನ್ನು ಹೆರುವ ಬದಲು ಹರ್ಷ, ಪ್ರವೀಣರಂಥ ಒಬ್ಬೊಬ್ಬ ಮಕ್ಕಳಿದ್ದರೆ ಸಾಕು: ಚೈತ್ರಾ ಕುಂದಾಪುರ

Prasthutha|

ಆನೇಕಲ್: ಹಂದಿಗಳಂತೆ ಹತ್ತಾರು ಮರಿಗಳನ್ನು ಹೆರುವುದಕ್ಕಿಂತ ಸಮಾಜಕ್ಕೆ ಮಾದರಿಯಾಗಬಲ್ಲ ಹರ್ಷ, ಪ್ರವೀಣರಂಥ ಒಬ್ಬೊಬ್ಬ ಮಕ್ಕಳಿದ್ದರೆ ಸಾಕು ಎಂದು ಹಿಂದುತ್ವ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬುಧವಾರ ರಾತ್ರಿ ಆನೇಕಲ್’ನ ಸಮೀಪದ ಮರಸೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಬೃಹತ್ ಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಕತ್ತಿಯನ್ನು ಹಿಡಿದು ಬಂದು ಮತಾಂತರ ಮಾಡಲು ಬಂದರೆ ನಾವು ಎದೆಯೊಡ್ಡಿ ನಿಲ್ಲುತ್ತೇವೆ. ಆದರೆ ಇನ್ನು ಕೆಲವರು ಮಾರು ವೇಷದಲ್ಲಿ ಬರುತ್ತಾರೆ. ಇವರು ಸ್ಲೋ ಪಾಯ್ಸನ್ ಇದ್ದಂತೆ. ಇವರು ಬಂದಿದ್ದೇ ಗೊತ್ತಾಗುವುದಿಲ್ಲ. ಮನೆ ಬಾಗಿಲಿಗೆ ಅಕ್ಕಿ ಚೀಲವನ್ನು ತಂದು ಸಹಾಯ ಮಾಡ್ತೀವಿ ಎನ್ನುತ್ತಾರೆ. ನಮ್ಮ ಮನೆಯಲ್ಲಿರುವ ಭಗವದ್ಗೀತೆಯನ್ನು ತೆಗೆದು ಅವರ ಬೈಬಲ್ ಇಟ್ಟು ಕುತ್ತಿಗೆಯಲ್ಲಿದ್ದ ರುದ್ರಾಕ್ಷಿ ತೆಗೆದು ಅವರ ಮಾಲೆಯನ್ನು ಹಾಕಿ ಹೋಗ್ತಾರೆ. ಸ್ಲೋ ಪಾಯ್ಸನ್ ಗಳಷ್ಟು ಡೇಂಜರಸ್ ಬೇರೆ ಯಾರೂ ಇಲ್ಲ. ಸಹಾಯ ಮಾಡುವ ನೆಪದಲ್ಲಿ ಮತಾಂತರ ಮಾಡಲು ಬರುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕುʼʼ ಎಂದು ಚೈತ್ರಾ ಹೇಳಿದರು.



Join Whatsapp