ಬೆಂಗಳೂರು: ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ಮಾರ್ಚ್ 16ರ ಮಧ್ಯರಾತ್ರಿಯಿಂದ ಪ್ರತಿಭಟನೆ ನಡೆಸಲು ಕರೆ ನೀಡಿದ್ದು, ಮಾತುಕತೆ ಯಶಸ್ವಿ ಬಳಿಕ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ಹೇಳಿದ್ದಾರೆ.
ಮಧ್ಯಮ ಹಾಗೂ ಲಘು ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ಬೆಳಗ್ಗೆ ಮತ್ತು ಸಂಜೆ ನಿಷೇಧಿಸಿರುವುದನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಆದರೆ ಇಂದಿನ ಮಾತುಕತೆ ಯಶಸ್ವಿ ಬಳಿಕ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ.
ಮಾತುಕತೆ ಯಲ್ಲಿ ಮುಖಂಡರಾದ ಷನ್ಮುಖಪ್ಪ ,ಕಾರ್ಯದರ್ಶಿ ಕೆ.ಎನ್.ಅಶ್ವತ್ಥ್ , ಜಂಟಿ ಕಾರ್ಯದರ್ಶಿ ಮಧು, ಮುರುಗನ್, (ಕೆಜಿಟಿಎ ಅಧ್ಯಕ್ಷ) ಪಾಂಡೆ, (ಕೆಸಿಟಿಎ ಅಧ್ಯಕ್ಷ) ಮುನಿಕೃಷ್ಣ, (ಎಸ್ ಕೆಟಿ) ಮುಖಂಡರಾದ ಸೆಂದಿಲ್ ಕುಮಾರ್, ರಾಜೇಶ್ ಗೌಡ, ರಾಮಸ್ವಾಮಿ ರೆಡ್ಡಿ ಮತ್ತಿತರರು ಭಾಗಿಯಾಗಿದ್ದರು.