ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣ: ದೋಹಾವನ್ನು ಹಿಂದಿಕ್ಕಿದ ಚಾಂಗಿ

Prasthutha|

ಮಲಯಿ: ಸಾಂಕ್ರಾಮಿಕದ ಕಟ್ಟುನಿಟ್ಟಿನ ಎರಡು ವರ್ಷ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಗರಿಮೆಯನ್ನು ಕತಾರ್’ಗೆ ಬಿಟ್ಟುಕೊಟ್ಟಿದ್ದ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು ಮತ್ತೆ ಮೊದಲನೆಯ ಸ್ಥಾನಕ್ಕೆ ಬಂದು ಕುಳಿತಿದೆ.

- Advertisement -


ಆ ಮೂಲಕ ದೋಹದ ಹಮ್ದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎರಡನೆಯ ಸ್ಥಾನಕ್ಕೆ ತಳ್ಳಿದೆ. ಟೋಕಿಯೋದ ಹನೆಡೊ ವಿಮಾನ ನಿಲ್ದಾಣ ಮೂರನೆಯ ಸ್ಥಾನದಲ್ಲಿದೆ.
ಸ್ಕಯ್ಟ್ರಾಕ್ಸ್ ವಿಶ್ವ ವಿಮಾನ ನಿಲ್ದಾಣ ಪ್ರಶಸ್ತಿಗಳು 2023ರ ಪಟ್ಟಿಯಲ್ಲಿ ಯುಎಸ್’ಎಯ ಯಾವ ವಿಮಾನ ನಿಲ್ದಾಣವೂ ಮೊದಲು 10 ಸ್ಥಾನದೊಳಗಡೆ ಇಲ್ಲ ಎಂಬುದು ವಿಶೇಷ.
ಪ್ಯಾರಿಸ್’ನ ಚಾರ್ಲ್ಸ್ ಡಿ ಗಾಲೆ ಯೂರೋಪಿನ ಮೇಲುಸ್ತರದ ವಿಮಾನ ನಿಲ್ದಾಣವಾಗಿದೆ. ಅದು 5ನೇ ಸ್ಥಾನದಲ್ಲಿದೆ. ಉತ್ತರ ಅಮೆರಿಕದ ಸೀಟಲ್ ಟಕೋಮಾ ಅತಿ ಹೆಚ್ಚಿನ ಎಂದರೆ 18ನೇ ಸ್ಥಾನದಲ್ಲಿದೆ. ಆದರೂ ಹಿಂದಿನ 27ಕ್ಕಿಂತ ಉತ್ತಮ ಸಾಧನೆ ಮಾಡಿದೆ.


ನ್ಯೂಯಾರ್ಕಿನ ಜೆಎಫ್ ಕೆ ಮತ್ತೆ ಮೂರು ಸ್ಥಾನ ಕೆಳಕ್ಕಿಳಿದು 88ನೇ ಸ್ಥಾನದಲ್ಲಿದೆ. ಚೀನಾದ ಸೆಂಜೆನ್ 26 ಸ್ಥಾನ ಮೇಲೆ ಜಿಗಿದು, ಹಾಂಗ್ ಕಾಂಗನ್ನೂ ಹಿಂದಿಕ್ಕಿ 31 ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ 19ನೇ ಸ್ಥಾನ ಪಡೆದಿದೆ. ಈ ಹಿಂದೆ ಅದು 26ನೆ ಸ್ಥಾನ ಪಡೆದಿತ್ತು. ಲಂಡನ್ನಿನ ಹೀತ್ರೂ ವಿಮಾನ ನಿಲ್ದಣವು 9 ಸ್ಥಾನ ಕೆಳ ಜಾರಿ 22ರಲ್ಲಿ ನಿಂತಿದೆ.
ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣವಾಗಿ ಚಾಂಗಿ 12ನೇ ಬಾರಿ ಗೆದ್ದಿದೆ ಎಂದು ಅಲ್ಲಿನ ಮುಖ್ಯಾಧಿಕಾರಿ ಲೀ ಸೀಓ ಹಿಯಾಂಗ್ ಹೇಳಿದ್ದಾರೆ.

- Advertisement -


ಕ್ರಮವಾಗಿ 20 ಮೊದಲ ಸ್ಥಾನದವುಗಳು ಹೀಗಿವೆ;
ಸಿಂಗಾಪುರ ಚಾಂಗಿ, ದೋಹದ ಹಮ್ದ್, ಟೋಕಿಯೋ ಹನೇಡಾ, ಪ್ಯಾರಿಸ್ ಚಾರ್ಲ್ಸ್ ಡಿ ಗಾಲೆ, ಇಸ್ತಾನ್ ಬುಲ್, ಮ್ಯೂನಿಚ್, ಜ್ಯೂರಿಚ್, ಟೋಕಿಯೋ ನಾರಿಟ, ಮ್ಯಾಡ್ರಿಡ್ ಬರಜಾಸ್, ವಿಯೆನ್ನಾ, ಹೆಲ್ಸಿಂಕಿ ವಂಟಾ, ರೋಮ್ ಫ್ಲೂಮಿಸಿನೋ, ಕೋಪನ್ ಹೇಗನ್, ಕನ್ಸಾಯ್, ಸೆಂಟ್ರಾಯೆರ್ ನಗೋಯ, ದುಬಾಯಿ, ಸೀಟಲ್ ಟಕೋಮ, ಮೆಲ್ಬೋರ್ನ್, ವ್ಯಾಂಕೂವರ್.



Join Whatsapp