ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಲು ಮುಖ್ಯ ಚುನಾವಣಾ ಆಯುಕ್ತರಿಗೆ ಎಸ್ ಡಿಪಿಐ ಒತ್ತಾಯ

Prasthutha|

ನವದೆಹಲಿ: ಚುನಾವಣೆಗೆ ಸಜ್ಜಾಗಿರುವ ಕರ್ನಾಟಕದಲ್ಲಿ ಬಿಜೆಪಿ ನಾಯಕರು ಮಾಡುತ್ತಿರುವ ಕೋಮುವಾದಿ ಹೇಳಿಕೆಗಳನ್ನು ಖಂಡಿಸಿರುವ ಎಸ್’ಡಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಇಂತಹ ಹೇಳಿಕೆಗಳನ್ನು ಗಮನಿಸಿ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಚುನಾವಣಾ ಆಯುಕ್ತರನ್ನು ಒತ್ತಾಯಿಸಿದ್ದಾರೆ.

- Advertisement -


ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪನವರ ಕೋಮುವಾದಿ ಹೇಳಿಕೆ ಖಂಡನೀಯ. ನಮಗೆ ರಾಷ್ಟ್ರೀಯವಾದಿ ಮುಸ್ಲಿಮರ ಮತಗಳು ಮಾತ್ರ ಸಾಕು ಎಂದು ಈಶ್ವರಪ್ಪ ಹೇಳಿದ್ದಾರೆ. ಇದು ಮುಸ್ಲಿಮರ ರಾಷ್ಟ್ರ ಪ್ರೇಮವನ್ನು ಪ್ರಶ್ನಿಸುವುದಾಗಿದೆ. ನಮಗೆ ಇಂತಹವರಿಂದ ಸರ್ಟಿಫಿಕೇಟ್ ಅಗತ್ಯವಿಲ್ಲ. ಮುಸ್ಲಿಮರು ಭಾರತೀಯರು ಮತ್ತು ದೇಶಪ್ರೇಮಿಗಳು, ಅದನ್ನು ಯಾರೂ ಪ್ರಶ್ನಿಸಲಾಗದು. ಹಾಗೆ ಯಾರಾದರೂ ಪ್ರಶ್ನಿಸಿದರೆ ಅದು ಸಂವಿಧಾನಕ್ಕೆ ಅಪಚಾರ ಎಂಬುದನ್ನು ಗಮನಿಸಬೇಕು ಎಂದು ಇಲ್ಯಾಸ್ ತುಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಬಿಜೆಪಿ ನಾಯಕರು ಒಂದರ ಹಿಂದೆ ಒಂದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾದ, ಅಸಾಂವಿಧಾನಿಕವಾದ ಹೇಳಿಕೆ ನೀಡುತ್ತಿದ್ದಾರೆ. ಈಶ್ವರಪ್ಪ ಈಗಾಗಲೇ ತಮ್ಮ ಸಂವಿಧಾನ ವಿರೋಧಿ ಹೇಳಿಕೆ ಭ್ರಷ್ಟಾಚಾರಗಳಿಂದಾಗಿ ಮಂತ್ರಿ ಹುದ್ದೆಯಿಂದ ಹೊರ ದೂಡಲ್ಪಟ್ಟಿದ್ದಾರೆ. ಈ ಬಿಜೆಪಿ ನಾಯಕನ ಹೇಳಿಕೆ ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಎಸ್ ಡಿಪಿಐ ಒತ್ತಾಯಿಸುತ್ತಿದೆ ಎಂದು ಇಲ್ಯಾಸ್ ತಿಳಿಸಿದ್ದಾರೆ.

- Advertisement -


ಕಳೆದ ವರ್ಷ ಈಶ್ವರಪ್ಪ ಸ್ವಾತಂತ್ರ್ಯ ವೀರ ಟಿಪ್ಪು ಸುಲ್ತಾನರನ್ನು ಮುಸ್ಲಿಂ ಗೂಂಡಾ ಎಂದು ಕರೆದಿದ್ದರು. ಇದು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಅವಮಾನಿಸುವುದಾಗಿದೆ ಎಂದು ಅವರು ಹೇಳಿದರು.
ಈಶ್ವರಪ್ಪನವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ ತುಂಬೆಯವರು, ಬಿಜೆಪಿ ನಾಯಕನ ಹೇಳಿಕೆಯು ಪ್ರಧಾನಿ ಮೋದಿಯವರ ‘ಎಲ್ಲರನ್ನು ಒಳಗೊಂಡ ರಾಜಕೀಯ’ ಎಂಬ ನೀತಿಗೆ ವಿರುದ್ಧವಾದುದು ಎಂದೂ ಅವರು ಹೇಳಿದರು.



Join Whatsapp