ಇಟಾನಗರ: ಭಾರತೀಯ ವಾಯುಪಡೆಗೆ ಸೇರಿದ ಮತ್ತೊಂದು ಹೆಲಿಕಾಪ್ಟರ್ ಪತನವಾಗಿದೆ.
ಅರುಣಾಚಲ ಪ್ರದೇಶದ ಬೋಂಬ್ಡಿಲಾದ ಮಂದಾಲಾ ಎಂಬಲ್ಲಿ ಚೀತಾ ಹೆಲಿಕಾಪ್ಟರ್ ಗುರುವಾರ ಪತನವಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಬೋಂಬ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಹೆಲಿಕಾಪ್ಟರ್ ಗುರುವಾರ ಬೆಳಿಗ್ಗೆ 9.15 ರ ಸುಮಾರಿಗೆ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು ಎಂದು ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ತಿಳಿಸಿದ್ದಾರೆ.
ವಾಯು ಯಾನ ಸಂಚಾರಕ್ಕೆ ತುಂಬ ಕೆಟ್ಟ ಪ್ರದೇಶ ಎಂದೇ ಅರುಣಾಚಲ ಪ್ರದೇಶವನ್ನು ಪರಿಗಣಿಸಲಾಗಿದೆ. ಈಶಾನ್ಯ ಭಾರತದ ಸುತ್ತಮುತ್ತಲ ಈ ಪ್ರದೇಶದಲ್ಲಿ ಈಗಾಗಲೆ ಹಲವು ವಿಮಾನ, ಹೆಲಿಕಾಪ್ಟರ್ ಪತನಗೊಂಡಿವೆ.
2022ರ ಅಕ್ಟೋಬರ್ ನಲ್ಲಿ ಅರುಣಾಚಲ ಪ್ರದೇಶದ ಮಿಗ್ಗಿಂಗ್’ನಲ್ಲಿ ಸೇನೆಯ ಎಎಲ್’ಎಚ್ ಹೆಲಿಕಾಪ್ಟರ್ ಪತನವಾಗಿ ಅದರ ಇಬ್ಬರು ಪೈಲಟ್ ಗಳ ಸಹಿತ ಐವರು ಮರಣ ಹೊಂದಿದ್ದರು.
“ಬೋಂಬ್ಡಿಲಾದ ಪಶ್ಚಿಮ ಭಾಗದಲ್ಲಿರುವ ಮಂಡಲ ಬಳಿ ವಿಮಾನ ಅಪಘಾತಕ್ಕೀಡಾಗಿದೆ. ಶೋಧ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ” ಎಂದು ಅವರು ಹೇಳಿದರು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.