ಪೀಯೂಶ್ ಗೋಯೆಲ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ಮಂಡನೆ

Prasthutha|

ನವದೆಹಲಿ: ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಸಂಸದ ರಾಹುಲ್ ಗಾಂಧಿಯವರು ಲಂಡನ್’ನಲ್ಲಿ ಮಾತನಾಡಿದ್ದನ್ನು ಕಟುವಾಗಿ ಟೀಕಿಸಿದ ಕೇಂದ್ರ ಮಂತ್ರಿ ಪೀಯೂಶ್ ಗೋಯೆಲ್ ವಿರುದ್ಧ ಕಾಂಗ್ರೆಸ್ಸಿನವರು ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

- Advertisement -


ಸಂಸತ್ ಕಲಾಪಗಳ ಬಗೆಗಿನ ವಿಧಿ ನಿಯಮಾವಳಿಗಳ 238ನೇ ನಿಯಮದಲ್ಲಿ ಸ್ಪಷ್ಟವಾಗಿ ಸಂಸತ್ತಿನ ಯಾರದೇ ಬಗ್ಗೆ ಹೊರಗೆಲ್ಲೋ ಅವಮಾನಕರವಾಗಿ ಮಾತನಾಡಬಾರದು ಎಂದು ಇದೆ ಎಂದು ಪೀಯೂಶ್ ಗೋಯೆಲ್ ಹೇಳಿದ್ದರು. ನಮ್ಮ ಸದಸ್ಯರು ಹೊರಗೆ ಅದೂ ವಿದೇಶದಲ್ಲಿ ನಿಯಮ 238ಎ ಮುರಿದು ಸಂಪ್ರದಾಯ ಮುರಿದಿದ್ದಾರೆ ಎಂದೂ ಗೋಯೆಲ್ ಆರೋಪಿಸಿದ್ದರು.
“ಮಂತ್ರಿ ಪೀಯೂಶ್ ಗೋಯೆಲ್ ಮತ್ತೆ ಮತ್ತೆ ಸಂಸದ್ ಸದಸ್ಯರೊಬ್ಬರ ಬಗ್ಗೆ ಸಮರ್ಪಕವಲ್ಲದ ನಿಯಮಾವಳಿ ಎತ್ತಿ ಹಿಡಿದು ಮಾತನಾಡಿದ್ದಾರೆ. ಅದು ಸತ್ಯಕ್ಕೆ ದೂರವಾದುದಾಗಿದೆ. ಸಂಸತ್ತಿನ ಸದಸ್ಯರನ್ನು ಗೋಯೆಲ್ ಅವರು ಉದ್ದೇಶಪೂರ್ವಕವಾಗಿ ತಪ್ಪು ನುಡಿಗಳಿಂದ ಟೀಕಿಸಿದ್ದಾರೆ” ಎಂದು ಹಕ್ಕು ಚ್ಯುತಿ ಎತ್ತಿದ ಕಾಂಗ್ರೆಸ್ಸಿನ ಗೋಹಿಲ್ ಹೇಳಿದರು.


ವಿದೇಶಿ ನೆಲದಲ್ಲಿ ಪ್ರಧಾನಿ ಮೋದಿಯವರು ದೇಶದ ವಿಷಯದಲ್ಲಿ ಟೀಕಿಸಿದ್ದಾಗ ಯಾವ ಪ್ರತಿ ಪಕ್ಷದ ಸದಸ್ಯರೂ ಅದನ್ನು ಪ್ರಶ್ನಿಸಿಲ್ಲ ಎಂಬುದನ್ನು ಶಕ್ತಿ ಸಿನ್ಹಾ ಗೋಹಿಲ್ ಈ ಸಂದರ್ಭದಲ್ಲಿ ಎತ್ತಿ ಹೇಳಿದರು.
“ಲೋಕ ಸಭಾ ಸಂಸದರಾಗಿದ್ದ ಎನ್. ಸಿ. ಚಟರ್ಜಿಯವರು ಸಂಸತ್ತಿನ ಹೊರಗೆ ಆಡಿದ್ದ ಕೆಲವು ವಿಷಯಗಳ ಬಗ್ಗೆ 1954ರ ಮೇ, 1ರಂದು ರಾಜ್ಯಸಭೆಯಲ್ಲಿ ಕೆಲವರು ಎತ್ತಲು ನೋಡಿದರಾದರೂ ಅದಕ್ಕೆ ಅವಕಾಶ ನೀಡಿಲ್ಲ” ಎಂಬುದನ್ನು ಗೋಹಿಲ್ ಉದಾಹರಣೆಯಾಗಿ ಹೇಳಿದರು.

- Advertisement -


“1967ರ ಜೂನ್ 19ರಂದು ರಾಜ್ಯ ಸಭಾ ಚೇರ್ಮನ್ ಆಗಿದ್ದ ವಿ. ವಿ. ಗಿರಿಯವರು ಒಂದು ಮನೆಯವರು ಇನ್ನೊಂದು ಮನೆಯ ಸದಸ್ಯರನ್ನು ದೂರಲು ಸಂಸತ್ ಮನೆಗಳನ್ನು ಬಳಸಿಕೊಳ್ಳಬಾರದು ಎಂಬ ನಿಯಮ ಒಳ್ಳೆಯದು ಎಂದು ಸ್ಪಷ್ಟಪಡಿಸಿದ್ದರು.” ಎಂಬುದನ್ನೂ ಗೋಹಿಲ್ ಒತ್ತಿ ಹೇಳಿದರು.



Join Whatsapp