ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ: ಕಾಂಗ್ರೆಸ್ ಲೇವಡಿ

Prasthutha|

ಬೆಂಗಳೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಕೋಲಾರದಲ್ಲಿ ಭಾನುವಾರ ನಡೆಯಬೇಕಿತ್ತು, ಆದರೆ ಯಾವುದೇ ಕಾರಣವಿಲ್ಲದೆ ದಿಢೀರನೇ ಮುಂದೂಡಿದೆ. ಇದನ್ನು ಟೀಕಿಸಿರುವ ಕಾಂಗ್ರೆಸ್, “ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ” ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದೆ.

- Advertisement -

“ಎಲ್ಲೇ ಹೋದರೂ ಬಿಜೆಪಿಗೆ ಖಾಲಿ ಕುರ್ಚಿಗಳೇ ಸ್ವಾಗತಿಸುತ್ತವೆ. ಖಾಲಿ ಕುರ್ಚಿಗಳು ಬಿಜೆಪಿ ನಿರ್ನಾಮದ ಕತೆ ಹೇಳುತ್ತವೆ. ಹಣ ನೀಡಿದರೂ, ಏನೇ ಸರ್ಕಸ್ ಮಾಡಿದರೂ ಬಿಜೆಪಿಯತ್ತ ಜನ ಸುಳಿಯದಿರುವುದು ಮಡುಗಟ್ಟಿದ ಜನಾಕ್ರೋಶಕ್ಕೆ ನಿದರ್ಶನ ಎಂದು ಟೀಕಿಸಿದೆ. ಖಾಲಿ ಕುರ್ಚಿ ಕಂಡು ಯಾತ್ರೆ ಮೊಟಕುಗೊಳಿಸುವುದಕ್ಕಿಂತ ನಾಚಿಕೆಗೇಡು ಇನ್ನೇನಿದೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

ನಗರದೆಲ್ಲೆಡೆ ಬಿಜೆಪಿ ಬಾವುಟಗಳು, ಪ್ಲೆಕ್ಸ್, ಬ್ಯಾನರ್‌ಗಳು ತುಂಬಿದ್ದವು. ನಗರದ ಬೈರೇಗೌಡ ಬಡಾವಣೆಯ ಬಳಿಯ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಿ ಸಾವಿರಾರು ಕುರ್ಚಿಗಳನ್ನು ಹಾಕಲಾಗಿತ್ತು. ಸಂಜೆ 5 ಗಂಟೆಗೆ ಪಕ್ಷದ ಸಾರ್ವಜನಿಕ ಸಭೆ ಆರಂಭವಾಗಬೇಕಿತ್ತು. ಯಾತ್ರೆಯೂ ನಿಗದಿಗಿಂತ ಎರಡು ಗಂಟೆ ತಡವಾಗಿತ್ತು. ಆ ಸಮಯದಲ್ಲಿ ಜನರಿಲ್ಲದೆ ಕುರ್ಚಿಗಳು ಖಾಲಿ ಬಿದ್ದಿದ್ದವು. ಮಾಲೂರು ಪಟ್ಟಣದಲ್ಲಿ ರಾಲಿ ನಡೆಸಿ ಬಳಿಕ ಕೋಲಾರ ತಾಲ್ಲೂಕಿನ ವಕ್ಕಲೇರಿ, ಪಾಕ್ಷ್ಯಗಾನಹಳ್ಳಿ, ಛತ್ರಕೋಡಿಹಳ್ಳಿ ಮಾರ್ಗವಾಗಿ ಯಾತ್ರೆ ಕೋಲಾರ ನಗರಕ್ಕೆ ಬಂದಿದೆ. ಅಷ್ಟರಲ್ಲಿ ಪಕ್ಷದ ಮುಖಂಡರು ವಾಪಸ್ ತೆರಳಿದರು.



Join Whatsapp