ಆಝಾನ್ ವಿರುದ್ಧ ಈಶ್ವರಪ್ಪನ ಹೇಳಿಕೆ| ಆಡಳಿತ ಬಿಜೆಪಿ ಪಕ್ಷದ ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ: ಎಸ್‌ ಡಿಪಿಐ

Prasthutha|

►ವಂಶಹತ್ಯೆ ಮತ್ತು ನರಮೇಧಗಳ ಇತಿಹಾಸ ನಿರ್ಮಾಪಕರಿಗೆ ಆಝಾನ್ ಇಂಪಾದ ಧ್ವನಿ ಕರ್ಕಶವಾಗಿ ಕೇಳುವುದರಲ್ಲಿ ಆಶ್ಚರ್ಯವಿಲ್ಲ: ಅನ್ವರ್ ಸಾದಾತ್ ಬಜತ್ತೂರು

- Advertisement -

ಮಂಗಳೂರು: ನಗರದ ಕಾವೂರಿನಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಾಸಕ ಹರಕಲು ಬಾಯಿಯ ಈಶ್ವರಪ್ಪ ಭಾಷಣ ಮಾಡುವ ಸಂದರ್ಭದಲ್ಲಿ ಪಕ್ಕದ‌ ಮಸೀದಿಯಿಂದ ಆಝಾನ್ ಆಗುವಾಗ ಉದ್ದೇಶಪೂರ್ವಕವಾಗಿ ಆಝಾನ್ ನನ್ನು ಮತ್ತು ಅಲ್ಲಾಹುವಿನ ಬಗ್ಗೆ ಅವಹೇಳನ ನಡೆಸಿ ಕೋಮುದ್ವೇಷ ಹರಡಿಸಿ ಗಲಭೆ ಮತ್ತು ಅಶಾಂತಿ ಹಬ್ಬಲು ಪ್ರಯತ್ನಿಸಿದ ಘಟನೆಯ ಬಗ್ಗೆ ಎಸ್‌ ಡಿಪಿಐ ದ.ಕ ಜಿಲ್ಲಾ ಪ್ರಧಾ‌ನ  ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು, ಪ್ರಪಂಚಾದ್ಯಂತ ನಮಾಝ್ ಗೆ ಮುಂಚಿತವಾಗಿ ಆಝಾನ್ ಕೊಡುವುದು ಮುಸ್ಲಿಂ ಸಮುದಾಯದ ಆರಾಧನಾ ಪದ್ಧತಿಯ ಭಾಗವಾಗಿದೆ. ಅದನ್ನು ಆಝಾನ್ ನಡೆಯುತ್ತಿರುವ ಸಂದರ್ಭದಲ್ಲೇ ಅವಹೇಳನ ನಡೆಸಿರುವುದು ಲೋಕಾದ್ಯಂತ ಇರುವ ಮುಸ್ಲಿಮರ ನಂಬಿಕೆಗೆ ಘಾಸಿ ತರುವ  ಷಡ್ಯಂತರ ವಾಗಿದೆ ಹಾಗೂ ಕೋಮು ಗಲಭೆ ನಡೆಸುವ ಹುನ್ನಾರವಾಗಿದೆ. ದೇಶಾದ್ಯಂತ ವಂಶಹತ್ಯೆ ‌ ಹಾಗೂ ನರಮೇಧಗಳ ನಿರ್ಮಾಪಕರಿಗೆ ಆಝಾನ್ ಶಬ್ದದ ಇಂಪಾದ ಧ್ವನಿ ಕರ್ಕಶವಾಗಿ ಕೇಳುತ್ತಿದೆ ಇದು ಅವರ ಕೊಳಕು ಮನಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ರಾಜ್ಯ ಕಂಡ ಅತ್ಯಂತ ದುರಂತ ಮತ್ತು ದುರ್ಬಲ ನಾಯಕ ಈಶ್ವರಪ್ಪ ತನ್ನ 40% ಕಮಿಷನ್ ದಂದೆಯಿಂದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರನಾಗಿದ್ದ ಸಂತೋಷ ಪಾಟೀಲ ಆತ್ಮಹತ್ಯೆಗೈದ ಪರಿಣಾಮ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿತ್ತು. ಈ ನಾಯಕನ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲೆ ಅಸಮಾಧಾನವಿದೆ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗುವುದು ಅನುಮಾನ ಎಂದರಿತಿರುವ ಈಶ್ವರಪ್ಪ ತನ್ನ ಹರಕಲು ನಾಲಗೆ ಹರಿಯಬಿಡುವ ಮೂಲಕ ಮುಸ್ಲಿಮ್ ಸಮುದಾಯದ ಆಚಾರ ವಿಚಾರಗಳ ಬಗ್ಗೆ ಮಾತನಾಡಿ ಅಂಧ ಭಕ್ತರ ಚಪ್ಪಾಳೆ ಗಿಟ್ಟಿಸಿ ಸಂಘಪರಿವಾರ ಮುಖಂಡರ ಮನವೊಲಿಸಿ ಮುಂದಿನ ಚುನಾವಣೆಗೆ ಟಿಕೆಟ್ ಪಡೆಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.

ಈ ಹರಕಲು ಬಾಯಿಯ ಬಿಜೆಪಿಯ ನಾಯಕ ಈ ಹಿಂದೆಯೂ ಅನೇಕ ಬಾರಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಬಗ್ಗೆ ನಾಲಗೆ ಹರಿಯಬಿಟ್ಟ ಘಟನೆ ನಡೆದಿತ್ತು. ಪೋಲಿಸ್ ಇಲಾಖೆ ಮತ್ತು ಸರ್ಕಾರ ಕಾನೂನು ಕ್ರಮ ಜರುಗಿಸದೇ ಇರುವುದರಿಂದ ಇಂತಹ ಅಶಾಂತಿ ಮೂಡಿಸುವ ಬಾಷಣಗಳು ಪುನರಾವರ್ತನೆಯಾಗುತ್ತಲೇ ಇದೆ. ಕೋಮುದ್ವೇಷದ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್’ನ ಆದೇಶ ಇದ್ದರೂ ಪೊಲೀಸ್ ಇಲಾಖೆ ಮೌನವಹಿಸಿರುವುದು ಖಂಡನೀಯವಾಗಿದೆ.



Join Whatsapp