ಬೆಂಗಳೂರು: ಪತ್ನಿಯ ವಿಪರೀತ ನಿದ್ರೆ ಕಾಟಕ್ಕೆ ಬೇಸತ್ತು ಆಕೆಯ ವಿರುದ್ಧ ಪತಿ ಬಸವನಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪತಿ ಕಮ್ರಾನ್ ಖಾನ್ ತನ್ನ ಪತ್ನಿ ವಿರುದ್ಧ ನೀಡಿರುವ ದೂರಿನಲ್ಲಿ ಪತ್ನಿ ರಾತ್ರಿ ಮಲಗಿದರೆ ಮರು ದಿನ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡುತ್ತಾಳೆ. ಮತ್ತೆ ಸಂಜೆ 5-30ಕ್ಕೆ ಮಲಗಿದರೆ ರಾತ್ರಿ 9-30 ಕ್ಕೆ ಎದ್ದೇಳುತ್ತಾಳೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಮಾಡುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಪತ್ನಿಯ ವಿಪರೀತ ನಿದ್ರಾ ಕಾಟಕ್ಕೆ ಬೇಸತ್ತು. ಆಕೆಯ ವಿರುದ್ಧ ಕಮ್ರಾನ್ ಖಾನ್ ಕೋಪಗೊಂಡಿದ್ದಾನೆ. ಆಯೇಷಾ ಫರ್ಹಿನ್ ಅಡುಗೆ ಕೂಡ ಮಾಡುವುದಿಲ್ಲ, ನನ್ನ ತಾಯಿಯೇ ಅಡುಗೆ ಮಾಡಿ ಬಡಿಸಬೇಕು. ನಾನು ಪ್ರಶ್ನಿಸದೆ ಸುಮ್ಮನಿದ್ದೆ, ಆದರೆ ಈಗ ಕುಟುಂಬಸ್ಥರಿಂದ ಹಲ್ಲೆ ನಡೆಸಿದ್ದಾಳೆ.
ತನಗೆ ಪತ್ನಿಯಿಂದ ಹಾಗೂ ಆಕೆಯ ಕುಟುಂಬದವರಿಂದ ನರಕಯಾತನೆ ಅನುಭವಿಸಯತ್ತಿದ್ದೇನೆ. ಹೀಗಾಗಿ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ರಾಯಲ್ ಲೈಫ್ ಲೀಡ್ ಮಾಡುವ ಉದ್ದೇಶದಿಂದ ತನ್ನನ್ನು ಆಯೇಷಾ ಫರ್ಹಿನ್ ಮದುವೆಯಾಗಿದ್ದಾಳೆ.…ಆಕೆಗೆ ಮದುವೆಗೆ ಮುಂಚೆಯೇ ಖಾಯಿಲೆಗಳಿದೆ. ಅದನ್ನ ಮರೆ ಮಾಚಿ ಐದು ವರ್ಷದ ಹಿಂದೆ ನನಗೆ ಆಕೆಯನ್ನು ನನಗೆ ಮದುವೆ ಮಾಡಿಸಿದ್ದಾರೆಂದು ದೂರಿನಲ್ಲಿ ಕಮ್ರಾನ್ ಖಾನ್ ಹೇಳಿದ್ದಾರೆ.
ಪತ್ನಿ ಕಡೆಯವರಿಂದ ಹಲ್ಲೆ:
ಹುಟ್ಟುಹಬ್ಬದ ನೆಪದಲ್ಲಿ 20-25 ಜನರನ್ನು ಮನೆಗೆ ಆಹ್ವಾನಿಸಿ ಆ ನೆಪದಲ್ಲಿ ಹಲ್ಲೆ ನಡೆಸಿರುವುದಾಗಿ ಪತಿ ಕಮ್ರಾನ್ ಆರೋಪಿಸಿದ್ದಾರೆ. ಮನೆಯಲ್ಲಿ ಕೆಲಸ ಮಾಡಲು ಹೇಳಿದರೆ ತನ್ನ ಜೊತೆ ಜಗಳವಾಡಿ 15-20 ದಿನ ತವರು ಮನೆಗೆ ಸೇರಿಕೊಳ್ಳುತ್ತಾಳೆ. ತನ್ನ ಬಗ್ಗೆ ಕಿಂಚಿತ್ತೂ ಪ್ರೀತಿ , ಮಮಕಾರ ಇಲ್ಲ, ತನ್ನ ಆಸ್ತಿ ಲಪಟಾಯಿಸಲು, ಮದುವೆಯಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ ಕಮ್ರಾನ್ ಖಾನ್ ದೂರಿದ್ದಾರೆ.
ಕಮ್ರಾನ್ ಖಾನ್ ಪತ್ನಿ ಆಯೇಷಾ ನಿದ್ರಾ ಕಾಯಿಲೆಗೆ ಬೇಸತ್ತು ಮಾವ ಆರಿಫುಲ್ಲ , ಅತ್ತೆ ಹೀನಾ ಕೌಸರ್, ಮೈದುನ ಮೊಹಮ್ಮದ್ ಮೋಯಿನ್ ವಿರುದ್ಧ ದೂರು ದಾಖಲಿಸಿದ್ದಾರೆ.