ನವದೆಹಲಿ: ದೆಹಲಿಯಲ್ಲಿ ಶಾಸಕರ ವೇತನವನ್ನು ಹೆಚ್ಚಳ ಮಾಡಿ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಪರಿಣಾಮವಾಗಿ ದೆಹಲಿ ಶಾಸಕರ ವೇತನ ತಿಂಗಳಿಗೆ 54,000 ರೂ. ಯಿಂದ 90,000 ರೂ.ಗೆ ಏರಿಕೆಯಾಗಿದೆ.
ದೆಹಲಿ ವಿಧಾನಸಭೆಯ ಶಾಸಕರು ತಮ್ಮ ಮಾಸಿಕ ವೇತನ ಹಾಗೂ ಭತ್ಯೆಗಳಲ್ಲಿ ಶೇ.66.7 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ. ಇದರ ಪ್ರಕಾರ ತಿಂಗಳಿಗೆ ಸುಮಾರು 54,000 ರೂ. ಯಿಂದ 90,000 ರೂ. ವರೆಗೆ ವೇತನದಲ್ಲಿ ಹೆಚ್ಚಳವನ್ನು ಪಡೆಯಲಿದ್ದಾರೆ.
ಇದಲ್ಲದೇ ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ನಾಯಕರ ಸಂಬಳ ಮಾಸಿಕವಾಗಿ 72,000 ರೂ. ಯಿಂದ 1,70,000 ರೂ.ಗೆ ಏರಿಕೆಯಾಗಿದೆ.
ದೆಹಲಿ ಶಾಸಕರ ವೇತನ ಭಾರೀ ಹೆಚ್ಚಳ: ಎಷ್ಟು ಗೊತ್ತಾ?
Prasthutha|