ಒಂದು ಶ್ರೇಯಾಂಕ-ಒಂದು ಪಿಂಚಣಿ ತಾರತಮ್ಯ ನಿವಾರಣೆಗೆ ಆಗ್ರಹ: ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ

Prasthutha|

ಬೆಂಗಳೂರು: ಸೇನಾ ವಲಯದ ಒಂದು “ಶ್ರೇಯಾಂಕ ಒಂದು ಪಿಂಚಣಿ” ತಾರತಮ್ಯ ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರಾಜ್ಯದ ಮಾಜಿ ಸೈನಿಕರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

- Advertisement -

ಒ.ಆರ್.ಒ.ಪಿ ಯೋಜನೆಯ ತಾರತಮ್ಯವನ್ನು ತಕ್ಷಣವೇ ಕೇಂದ್ರ ಸರ್ಕಾರ ನಿವಾರಿಸಬೇಕು. ದೇಶಕ್ಕಾಗಿ ತ್ಯಾಗ ಬಲಿದಾನಗೈದ ಸೈನಿಕರಿಗೆ ನ್ಯಾಯ ಒದಗಿಸಬೇಕು. ಇಂದಿನಿಂದ ಆರಂಭವಾಗಿರುವ ಸಂಸತ್ ಅಧಿವೇಶನ ಸಂದರ್ಭದಲ್ಲಿ ಸಮಸ್ಯೆಗೆ ನ್ಯಾಯಯುತ ಪರಿಹಾರ ಒದಗಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವೀರ ನಾರಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಮಾಜಿ ಸೈನಿಕರ ಸಂಘ ಮತ್ತು ದೆಹಲಿಯ ವಾಯ್ಸ್ ಆಫ್ ಎಕ್ಸ್ ಸರ್ವಿಸ್ ಮೆನ್ ಸೊಸೈಟಿ  ಹಾಗೂ ಹಲವು ರಾಜ್ಯಗಳ ಮಾಜಿ ಸೈನಿಕ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- Advertisement -

ಕರ್ನಾಟಕ ಮಾಜಿ ಸೈನಿಕರ ಸಂಘಟನೆ ರಾಜ್ಯದ್ಯಕ್ಷ ಡಾ. ಶಿವಣ್ಣ ಎನ್.ಕೆ, ತುಮಕೂರು ಜಿಲ್ಲಾಘಟಕ, ಧಾರವಾಡ, ಮೈಸೂರು ಹಾಗೂ ಬೆಂಗಳೂರು ಜಿಲ್ಲಾ ಘಟಕದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.



Join Whatsapp