ಚಿತ್ರದುರ್ಗ: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಚಿತ್ರದುರ್ಗ ಜಿಲ್ಲಾ ಸಮಿತಿ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಮಾಜಿಕ ಹೋರಾಟಗಾರ್ತಿ ಕಮಲಾರವರು ಸಭೆಯನ್ನುದ್ದೇಶಿಸಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ಹಾಗೂ ವಿಮ್ ಜಿಲ್ಲಾಧ್ಯಕ್ಷೆ ತಹ್ಸೀನಾ ಪ್ರಸಕ್ತ ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಅದರಂತೆ MSC ಯಲ್ಲಿ 3ನೇ ಶ್ರೇಣಿ ಪಡೆದ ಹಾಫಿಝಾ,BCA ಯಲ್ಲಿ 5ನೇ ಶ್ರೇಣಿ ಪಡೆದ ಮೊಯೀನಾ ಹಾಗೂ ರಾಜ್ಯ , ರಾಷ್ಟ್ರ ಮಟ್ಟದಲ್ಲಿ ಮೊದಲನೇ ಸ್ಥಾನ ಪಡೆದ ಕರಾಟೆ ಚಾಂಪಿಯನ್ ಬೀಬಿ ಹಾಜಿರಾ ರವರಿಗೆ ಸನ್ಮಾನಿಸಲಾಯಿತು.
ವಿಮ್ ಜಿಲ್ಲಾ ಕೋಶಾಧಿಕಾರಿ ಸಬ್ರೀನ್ ತಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿಮ್ ಜಿಲ್ಲಾ ಉಪಾಧ್ಯಕ್ಷೆ ನವೀದಾ ಸ್ವಾಗತಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುಖಯ್ಯಾ ಧನ್ಯವಾದ ಸಲ್ಲಿಸಿದರು, ಸೆಹರ್ ಕಾರ್ಯಕ್ರಮವನ್ನು ನಿರೂಪಿಸಿದರು.