ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಮಹಿಳೆಯನ್ನು ಬೆದರಿಸಿ 38 ಸಾವಿರ ರೂ.ದೋಚಿದ್ದ ವ್ಯಕ್ತಿಯ ಬಂಧನ

Prasthutha|

ಮಂಗಳೂರು: ಪೊಲೀಸ್ ಅಧಿಕಾರಿ ಎಂದು ಪೋಸು ನೀಡಿ ಮಹಿಳೆಯನ್ನು ಬೆದರಿಸಿ 38 ಸಾವಿರ ರೂ. ಹಣ ಪಡೆದು ವಂಚಿಸಿದ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

- Advertisement -

ಕಾವೂರು ಈಶ್ವರ‌ನಗರ ಸರಕಾರಿ ಗುಡ್ಡೆಯ ನಿವಾಸಿ ಶಿವರಾಜ್ ದೇವಾಡಿಗ ಬಂಧಿತ ಆರೋಪಿ.

ಸವಿತಾ (45) ಎಂಬವರಿಗೆ ಶಿವರಾಜ್ ತಾನು ಪೊಲೀಸ್ ಎಂಬುದಾಗಿ ಪೋಸು ನೀಡಿ “ನೀವು ಮಸಾಜ್ ಪಾರ್ಲರ್ ನಡೆಸುವುದಕ್ಕೆ ಹಾಗೂ ಹೆಚ್ಚು ಬಂಗಾರ ಮತ್ತು ಹಣವನ್ನು ಇಟ್ಟುಕೊಂಡಿರುವ ಬಗ್ಗೆ ದೂರು ಬಂದಿದೆ. ಈ ಪ್ರಕರಣ ಮುಚ್ಚಿ ಹಾಕಲು ಹಣ ಕೊಡಬೇಕು ಇಲ್ಲದಿದ್ದರೆ ದಾಳಿ ಮಾಡುತ್ತೇವೆ” ಎಂದು ಬೆದರಿಸಿ 38,000 ರೂ. ಪಡೆದುಕೊಂಡಿದ್ದ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

ಬಂಧಿತ ಈ ಹಿಂದೆ ಗೃಹರಕ್ಷಕ ದಳದಲ್ಲಿದ್ದ.‌ ಅದೇ ಯೂನಿಫಾರಂ ಹಾಕಿಕೊಂಡು ಮಹಿಳೆಯನ್ನು ಹೆದರಿಸಿದ್ದ ಎಂದು ತಿಳಿದು ಬಂದಿದೆ.



Join Whatsapp