ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಂದುಳಿದ ವರ್ಗಗಳ ವಿವಿಧ ನಿಗಮಗಳ ವತಿಯಿಂದ 1.14 ಲಕ್ಷ ಫಲಾನುಭವಿಗಳಿಗೆ 900 ಕೋಟಿ ರೂ.ಗಳನ್ನು ಇಂದು ಬಿಡುಗಡೆ ಮಾಡಿದರು.

- Advertisement -


ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ವಿವಿಧ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಯಾರಿಗೋಸ್ಕರ ಈ ಶಕ್ತಿ ಸೌಧ ಕಟ್ಟಿದ್ದಾರೆ ಅವರು ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅದರ ಲಾಭವನ್ನು ಪಡೆಯುವುದು ವ್ಯವಸ್ಥೆ ನಿಜವಾದ ಪ್ರಜಾಪ್ರಭುತ್ವದ ವ್ಯವಸ್ಥೆ ಎಂದರು.


ಸರ್ಕಾರ ಜನರಿಂದ ಸ್ಥಾಪಿತವಾಗಿದ್ದು, ಇದರ ಅರಿವಿನಿಂದ ಈ ಸೌಧದಲ್ಲಿ ಕೆಲಸ ಮಾಡಬೇಕು. ನ್ಯಾಯ ಕೊಡುವ ಭ್ರಮೆ ಹುಟ್ಟಿಸುವುದರಿಂದ ಬದುಕು ಬಂಗಾರವಾಗೋಲ್ಲ. ಹುಸಿ ಭರವಸೆಯನ್ನ ಕೊಟ್ಟು ನ್ಯಾಯವನ್ನು ನೀಡಲಾಗದು. ವಸ್ತುನಿಷ್ಠವಾಗಿ ಬದುಕಿನಲ್ಲಿ ಸ್ವಾಭಿಮಾನ ಬದುಕನ್ನ ಬದಕಲು ಸಾಧ್ಯವೆಂದು ಮನಗಂಡು ಸರ್ಕಾರ ಕಾರ್ಯಕ್ರಮ ರೂಪಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು.



Join Whatsapp