ವೇಗವಾಗಿ ಸೇವೆ ಒದಗಿಸಲು ಗ್ರಾಮ ಒನ್ ಫ್ರಾಂಚೈಸಿಗಳಿಗೆ ಸಲಹೆ

Prasthutha|

ಮಂಗಳೂರು: ಸುಮಾರು 850ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿರುವ ಗ್ರಾಮ ಒನ್ ಫ್ರಾಂಚೈಸಿಗಳು, ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಗ್ರಾಮ ಒನ್ ಯೋಜನಾ ನಿರ್ದೇಶಕ ವರಪ್ರಸಾದ್ ರೆಡ್ಡಿ ಅವರು ಇತ್ತೀಚೆಗೆ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಒನ್ ಫ್ರಾಂಚೈಸಿಗಳ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಿದರು.
ಗ್ರಾಮ ಒನ್ ಫ್ರಾಂಚೈಸಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದಾಗಿವೆ, ಇನ್ನೂ ಹೆಚ್ಚಿನ ಸೇವೆಗಳನ್ನು ಗ್ರಾಮ ಒನ್ ಫ್ರಾಂಚೈಸಿಗಳ ಮೂಲಕ ನೀಡಲು ಸರ್ಕಾರದಿಂದ ಯತ್ನಿಸಲಾಗುತ್ತಿದೆ, ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಗ್ರಾಮ ಒನ್ ಫ್ರಾಂಚೈಸಿಗಳು ನಿರ್ವಹಿಸಬೇಕಾದ ಕೆಲಸಗಳ ಬಗ್ಗೆಯೂ ಅವರು ವಿವರಿಸಿದರು.

- Advertisement -


ಈಗಾಗಲೇ ಕಂದಾಯ ಇಲಾಖೆ ಸಾಕಷ್ಟು ಸೇವೆಗಳು ಗ್ರಾಮ ಒನ್ ಫ್ರಾಂಚೈಸಿಗಳ ಮೂಲಕವೇ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿವೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ರೈತ ಸಂಪರ್ಕ ಸೇವೆಗಳು, ಸಬ್ ರಿಜಿಸ್ಟರ್ ಕಚೇರಿ ಕೆಲಸಗಳು, ವಿದ್ಯಾರ್ಥಿ ವೇತನದ ಅರ್ಜಿಗಳು, ಮೋಜಣಿ ತಂತ್ರಾಂಶದ ಮೂಲಕ ಸೇರಿದಂತೆ ಇನ್ನಿತರ ಸೇವೆಗಳನ್ನು ಗ್ರಾಮ ಒನ್ ಫ್ರಾಂಚೈಸಿಗಳ ಮೂಲಕ ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಯತ್ನ ಮಾಡಲಾಗುವುದು ಎಂದು ಹೇಳಿದರು.


ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ ಹೆಲ್ತ್ ಕಾರ್ಡ್ ನೋಂದಣಿಯನ್ನು ಚುರುಕುಗೊಳಿಸಿ ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಗ್ರಾಮ ಒನ್ ಫ್ರಾಂಚೈಸಿಗಳ ಸೇವೆಗಳು ಜನಸಾಮಾನ್ಯರಿಗೆ ಕಡಿಮೆ ಅವಧಿಯಲ್ಲಿ ವೇಗವಾಗಿ ತಲುಪಿಸಬೇಕು ಎಂಬ ಉದ್ದೇಶದಿಂದ ತಾಂತ್ರಿಕ ದೋಷ ಹಾಗೂ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲಿಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.



Join Whatsapp