ಮಾ.12ರಂದು SDPI ಸಜಿಪನಡು ಗ್ರಾಮ ಸಮಿತಿಯಿಂದ ರಕ್ತದಾನ ಶಿಬಿರ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಜಿಪನಡು ಗ್ರಾಮ ಸಮಿತಿ ಹಾಗೂ ಯೆನಪೋಯ ಮೆಡಿಕಲ್ ಕಾಲೇಜು, ದೇರಳಕಟ್ಟೆ ವತಿಯಿಂದ ‘ರಕ್ತಕೊಟ್ಟು – ಬಾಂಧವ್ಯ ಕಟ್ಟು’ ರಕ್ತದಾನ ಮಾಸಾಚರಣೆಯ ಪ್ರಯುಕ್ತ ಮಾರ್ಚ್ 12ರಂದು ಸಜಿಪನಡು ಎಸ್’ಡಿಪಿಐ ಕಚೇರಿಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

- Advertisement -

ಅಂದು ಬೆಳಗ್ಗೆ  9.30ರಿಂದ ಮಧ್ಯಾಹ್ನ 2 ರ ತನಕ ಶಿಬಿರ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ. ರಕ್ತಕ್ಕಾಗಿ ಆಸ್ಪತ್ರೆಯಿಂದ ಕರೆಗಳು ನಿರಂತರವಾಗಿ ಬರುತ್ತಿವೆ. ರಕ್ತದ ಬೇಡಿಕೆ ಬಹಳಷ್ಟು ಇದೆ. ಈ ಹಿನ್ನೆಲೆಯಲ್ಲಿ ಪಕ್ಷ ಈ ಶಿಬಿರ ಏರ್ಪಡಿಸುತ್ತಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಸಜಿಪನಡು ಗ್ರಾಮ ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.



Join Whatsapp