ಜರ್ಮನಿಯ ಹ್ಯಾಂಬರ್ಗ್ ಚರ್ಚ್​ನಲ್ಲಿ ಗುಂಡಿನ ದಾಳಿ; 7 ಮಂದಿ ಸಾವು

Prasthutha|

ಜರ್ಮನಿಯ ಹ್ಯಾಂಬರ್ಗ್​ನಲ್ಲಿರುವ ಚರ್ಚ್​ ಒಂದರಲ್ಲಿ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ 7 ಮಂದಿ ಮೃತಪಟ್ಟಿರುವ ಕುರಿತು ವರದಿಯಾಗಿದೆ.

- Advertisement -

ಗುರುವಾರ (ಮಾರ್ಚ್ 9) ರಾತ್ರಿ 9:15 ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಜರ್ಮನಿ ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಗ್ರಾಸ್‌ಬೋರ್ಸ್ಟೆಲ್ ಜಿಲ್ಲೆಯ ಡೆಲ್ಬೋಜ್ ಸ್ಟ್ರೀಟ್‌ನಲ್ಲಿರುವ ಚರ್ಚ್‌ನಲ್ಲಿ ಗುಂಡು ಹಾರಿಸಲಾಗಿದೆ.

ಗುಂಡಿನ ದಾಳಿಯಲ್ಲಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.
ಅನೇಕ ರಸ್ತೆಗಳನ್ನು ಮುಚ್ಚಲಾಗಿದೆ. ಈ ಪ್ರದೇಶದಿಂದ ದೂರವಿರಲು ಸಾರ್ವಜನಿಕರಿಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಜರ್ಮನ್ ಪೊಲೀಸ್ ವಕ್ತಾರರು ಹೇಳಿದರು.



Join Whatsapp