ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದ ಆರೋಪ: ಪೋಷಕರು-ಶಿಕ್ಷಕರ ಮಾರಾಮಾರಿ

Prasthutha|

ಮೈಸೂರು: ಶುಲ್ಕ ಕಟ್ಟಿಲ್ಲವೆಂದು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದ ಆರೋಪ ಕೇಳಿ ಬಂದಿದ್ದು, ಮಕ್ಕಳ ಮುಂದೆಯೇ ಪೋಷಕರು ಮತ್ತು ಶಿಕ್ಷಕರ ನಡುವೆ ಮಾರಾಮಾರಿ ನಡೆದಿದೆ.

- Advertisement -

ಮೈಸೂರು ನಗರದ ಬೋಗಾದಿ 2ನೇ ಹಂತದಲ್ಲಿರುವ ರಾಯಲ್ ಕಾನ್ ಕಾರ್ಡ್ ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಗೆ ಕೂರಿಸದ ಶಾಲೆ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಶುಲ್ಕ ಕಟ್ಟಿಲ್ಲವೆಂದು 16 ಮಕ್ಕಳನ್ನು ಪರೀಕ್ಷೆಗೆ ಕೂರಿಸಿಲ್ಲ. ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲೆ ಖುಷಿ ಥಳಿಸಿದ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆ ಸುಡಿ ಬಿಸಿಲಲ್ಲೇ ಪೋಷಕರು ಶಾಲೆಗೆ ಧಾವಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕೆಂಡಕಾರಿದ್ದಾರೆ. ಶಾಲೆಯ ಮ್ಯಾನೇಜರ್ ಹರೀಶ್​​ಗೆ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸದ್ಯ ಸ್ಥಳಕ್ಕೆ ಸರಸ್ವತಿಪುರಂ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

ವಿದ್ಯಾಶ್ರಮ ಹೆಸರಲ್ಲಿ ಈ ಶಾಲೆ ನಡೆಯುತ್ತಿದ್ದು ಫೀಸು ಸಂಬಂಧ 16 ಜನ ವಿದ್ಯಾರ್ಥಿಗಳ ವಿಚಾರದಲ್ಲಿ ಗೊಂದಲವಿದೆ. ಸದ್ಯ ಪೀಸ್ ಕಟ್ಟದ 16 ವಿದ್ಯಾರ್ಥಿಗಳು ಶಾಲೆಯ ಹೊರಗೆ ಕುಳಿತಿದ್ದಾರೆ. ಶಾಲೆಯ ಪ್ರಕಾರ 1 ಲಕ್ಷದ 10 ಸಾವಿರ ಕಟ್ಟಬೇಕು. ಆದ್ರೆ ಪೋಷಕರ ಪ್ರಕಾರ 82 ಸಾವಿರ ಫೀಸು ಕಟ್ಟಬೇಕು ಎಂದು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸದ ಶಾಲಾ ಆಡಳಿತ ಮಂಡಳಿ ವಿರುದ್ದ ಶಿಕ್ಷಣ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ‌.



Join Whatsapp