ಬೆಂಗಳೂರು: ಇಲ್ಲಿನ ತ್ಯಾಗರಾಜನಗರದಲ್ಲಿರುವ ಪ್ರಸಿದ್ಧ ಗಣಪತಿ ಮಂದಿರದ ಗೋಪುರದ ಮೇಲಿನ ಯೇಸು ಕ್ರಿಸ್ತನ ಮೂರ್ತಿಯನ್ನು ತೆಗೆದು ಹಾಕಿ, ಆದ್ಯಂತಸಾಮಿ ಮೂರ್ತಿಯನ್ನು ರಾಷ್ಟ್ರ ರಕ್ಷಣಾ ಸಮಿತಿ ಎಂಬ ಹಿಂದುತ್ವ ವಾದಿಗಳ ಒಕ್ಕೂಟದ ಸದಸ್ಯರು ಇಟ್ಟಿದ್ದಾರೆ.
1967ರಲ್ಲಿ ಸ್ಥಳೀಯರೇ ಈ ಗಣಪತಿ ಗುಡಿ ಸ್ಥಾಪಿಸಿದ್ದರು. ಸರ್ವ ಧರ್ಮ ಸಮನ್ವಯ ದೃಷ್ಟಿಯಿಂದ ಗುಡಿಯ ಕೆಳಗಿನಿಂದ ಮೇಲಿನವರೆಗಿನ ಹಿಂದೂ ಮೂರ್ತಿಗಳ ನಡುವೆ ಬುದ್ಧ, ಬಸವ, ಚಂದ್ರ ತಾರೆ, ಮಹಾವೀರ, ಯೇಸು ಕ್ರಿಸ್ತ ಮೊದಲಾದ ಮೂರ್ತಿಗಳನ್ನು ಇಟ್ಟಿದ್ದರು.
ಕಳೆದ ಒಂದು ವರುಷದಿಂದ ಆಡಳಿತ ಮಂಡಳಿಗೆ ಕ್ರಿಸ್ತನ ಮೂರ್ತಿ ತೆಗೆಯುವಂತೆ ಹಿಂದುತ್ವ ಸಂಘಟನೆಗಳು ಒತ್ತಾಯ ಮಾಡುತ್ತಿದ್ದವು. ಆಡಳಿತ ಸಮಿತಿ ಗಮನಿಸಿಲ್ಲ ಎಂದು ನಿನ್ನೆ ಸಂಘ ಪರಿವಾರದ ರಾಷ್ಟ್ರ ರಕ್ಷಣಾ ಸಮಿತಿಯವರೇ ಕ್ರಿಸ್ತನ ಮೂರ್ತಿ ತೆಗೆದು ಉತ್ಸವ ಆಚರಿಸಿದ್ದಾರೆ.