ಚೆನ್ನೈ: ಬಿಹಾರದ ವಲಸೆ ಕಾರ್ಮಿಕರು ತಮಿಳುನಾಡಿನಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ವದಂತಿಯ ಹಿಂದಿನ ಸತ್ಯಾಸತ್ಯತೆ ತಿಳಿಯಲು ವಿಶೇಷ ತನಿಖಾ ತಂಡ ಬಿಹಾರದಿಂದ ತಮಿಳುನಾಡಿಗೆ ತಲುಪಿದೆ.
ಸದ್ಯ ತನಿಖಾ ತಂಡ ಕೊಯಮತ್ತೂರಿನಲ್ಲಿ ತನಿಖೆ ನಡೆಸುತ್ತಿದೆ. ತಮಿಳುನಾಡಿನಲ್ಲಿ ಬಿಹಾರ ಮೂಲದ ಕಾರ್ಮಿಕರನ್ನು ಹತ್ಯೆ ಮಾಡಲಾಗುತ್ತಿದೆ ಹಾಗೂ ಅಮಾನುಷವಾಗಿ ಥಳಿಸಲಾಗುತ್ತಿದೆ ಎಂಬ ಸುಳ್ಳು ಪ್ರಚಾರ ಟ್ವಿಟರ್ ಮೂಲಕ ಆರಂಭಗೊಂಡು ವಾಟ್ಸಾಪ್ ಮೂಲಕ ವಲಸೆ ಕಾರ್ಮಿಕರ ನಡುವೆ ಹರಡುತ್ತದೆ. ಮೂರು ದಿನಗಳಿಂದ ಈ ಸುಳ್ಳು ಸುದ್ದಿಯಿಂದ ಹೆದರಿ ಕಾರ್ಮಿಕರು ರಾಜ್ಯದಿಂದ ಗುಳೆ ಹೋಗುತ್ತಿದ್ದಾರೆ.
ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ವಲಸೆ ಕಾರ್ಮಿಕರಿಗಾಗಿ ತಮಿಳುನಾಡು ಸರ್ಕಾರ ಒದಗಿಸಿರುವ ಸೌಲಭ್ಯಗಳು ಹಾಗೂ ಸುಳ್ಳು ಸುದ್ದಿ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದೆ ಎನ್ನಲಾಗಿದೆ.