ಲಖನೌ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ವಿರುದ್ಧ ವಂಚನೆ ಪ್ರಕರಣ ಆರೋಪದಲ್ಲಿ ಎಫ್ ಐಆರ್ ದಾಖಲಾಗಿದೆ.
ಗೌರಿ ಖಾನ್ ರಾಯಭಾರತ್ವ ವಹಿಸಿದ್ದ ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.
ಜಸ್ವಂತ್ ಅವರು ತುಳಸಿಯಾನಿ ಸುಶಾಂತ್ ಗಾಲ್ಫ್ ಸಿಟಿ ಏರಿಯಾದ ಗಾಲ್ಫ್ ವ್ಯೂನಲ್ಲಿರುವ ಪ್ರಾಪರ್ಟಿ ಮೇಲೆ ಹೂಡಿಕೆ ಮಾಡಿದ್ದರು. 86 ಲಕ್ಷ ಕೊಟ್ಟು ಕೂಡಾ ಅವರಿಗೆ ಪ್ರಾಪರ್ಟಿಯ ಹಕ್ಕು ಸಿಕ್ಕಿಲ್ಲ. ಗೌರಿ ಖಾನ್ ಅವರು ರಾಯಭಾರಿಯಾಗಿರುವುದಕ್ಕೆ ನಾನು ತುಳಸಿಯಾನಿ ಕನ್ ಸ್ಟ್ರಕ್ಷನ್ & ಡೆವಲಪ್ಮೆಂಟ್ ಲಿಮಿಟೆಡ್ ಗ್ರೂಪ್ ನಿಂದ ಪ್ರಾಪರ್ಟಿ ಖರೀದಿಸಿದ್ದೇನೆ ಎಂದು ಜಸ್ವಂತ್ ಆರೋಪಿಸಿದ್ದಾರೆ.