ಮಂಗಳೂರು: ಐದು ವರ್ಷಗಳ ಹಿಂದೆ ಎಸ್’ಡಿಪಿಐ ವತಿಯಿಂದ ರಾಜ್ಯಾದ್ಯಂತ ನಡೆದ ಬಾಬರಿ ಎಕ್ಸ್ ಪೋ ಅಭಿಯಾನದ ಅಂಗವಾಗಿ ಉಳ್ಳಾಲದಲ್ಲಿ ನಡೆಸಿದ್ದ ಕಾರ್ಯಕ್ರಮವನ್ನು ಗುರಿಯಾಗಿಸಿ ಅಂದಿನ ಎಸ್’ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹಾಗೂ ಇತರರ ವಿರುದ್ಧ ದಾಖಲಿಸಿದ್ದ FIR ಅನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.
ಬಾಬರಿ ಎಕ್ಸ್’ಪೋ ಕಾರ್ಯಕ್ರಮದಲ್ಲಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಲಾಗಿದೆ ಎಂದು ಆರೋಪಿಸಿ ಎಸ್’ಡಿಪಿಐ ಮುಖಂಡ ಅಥಾವುಲ್ಲಾ ಜೋಕಟ್ಟೆ ಹಾಗೂ ಇತರರ ವಿರುದ್ಧ ಐಪಿಸಿ 153ಎ, 298, 505, ಕರ್ನಾಟಕ ಪೊಲೀಸ್ ಆಕ್ಟ್’ನ 105 ಸೆಕ್ಷನ್’ಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದ ಹೈಕೋರ್ಟ್ ಪೀಠ, ಪ್ರಕರಣವನ್ನು ವಜಾಗೊಳಿಸಿದೆ.
ಎಸ್ ಡಿಪಿಐ ಪರವಾಗಿ ಲತೀಫ್ ಬಡಗನ್ನೂರು ವಾದಿಸಿದ್ದರು.