SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಬ್ಲಾಕ್, ಗ್ರಾಮ ಸಮಿತಿ ಸಭೆ

Prasthutha|

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ, ಬ್ಲಾಕ್ ಹಾಗೂ ಗ್ರಾಮಸಮಿತಿ ಮಾಸಿಕ ಸಭೆಯು ದೇರಳಕಟ್ಟೆ ಪಕ್ಷದ ಕಚೇರಿಯಲ್ಲಿ ನಡೆಯಿತು

- Advertisement -


ಈ ಸಭೆಯ ಅಧ್ಯಕ್ಷತೆಯನ್ನು SDPI ಕ್ಷೇತ್ರ ಸಮಿತಿ ಸದಸ್ಯರಾದ ಇರ್ಶಾದ್ ಅಜ್ಜಿನಡ್ಕ ವಹಿಸಿದರು
ಸಭೆಯಲ್ಲಿ ಜಿಲ್ಲಾ ಸಮಿತಿಯ ಹಮ್ಮಿಕೊಂಡಿರುವ ರಕ್ತದಾನ ಮಾಸಾಚರಣೆಯನ್ನು ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಬೂತ್ ಫಸ್ಟ್ ಪೋಲ್ ನೆಕ್ಸ್ಟ್ ಎಂಬ ಕಾರ್ಯಕ್ರಮವನ್ನು ಬೂತ್ ಮಟ್ಟದಲ್ಲಿ ಯಾತಾವತ್ತಾಗಿ ಜಾರಿಗೊಳಿಸಲು ತೀರ್ಮಾನಿಸಲಾಯಿತು.


ಸಭೆಯಲ್ಲಿ SDPI ಕರ್ನಾಟಕ ರಾಜ್ಯ ಚುನಾವಣಾ ಜಂಟಿ ಉಸ್ತುವಾರಿ ನವಾಝ್ ಉಳ್ಳಾಲ್, SDPI ಮಂಗಳೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಮಾದ್ಯಮ ಉಸ್ತುವಾರಿ ರಿಜ್ವಾನ್ ಸಜಿಪ ಸಮಿತಿ ಸದಸ್ಯರಾದ ಸುಹೈಲ್ ಉಳ್ಳಾಲ್, ಆರಿಫ್ ಬೋಳಿಯಾರ್, ಕೋಶಾಧಿಕಾರಿ ಲತೀಫ್ ಕೋಡಿಜಾಲ್, ಬ್ಲಾಕ್, ಪಟ್ಟಣ ಪಂಚಾಯತ್ ಹಾಗೂ ಗ್ರಾಮಸಮಿತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.



Join Whatsapp