ತಿರುವನಂತರಪುರ: ರಾಜಕೀಯ ಚಟುವಟಿಕೆಗಳಲ್ಲಿ ಮುಳುಗಿರುವವರು, ರಾಜಕೀಯ ಹುದ್ದೆ ಹೊಂದಿರುವವರು ಮಲಬಾರ್ ದೇವಸ್ವಂ ಮಂಡಳಿಯ ವಂಶ ಪರಂಪರೆ ರಹಿತ ದೇವಾಲಯ ಟ್ರಸ್ಟಿ ಆಗಿರುವುದು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ನ್ಯಾಯಾಧೀಶರಾದ ಅನಿಲ್ ಕೆ. ನರೇಂದ್ರನ್, ಪಿ. ಜಿ. ಅಜಿತ್ ಕುಮಾರ್ ಅವರು ಮಲಬಾರ್ ದೇವಸ್ವ ಮಂಡಳಿಯ ಪೂಕೊಟ್ಟುಕಲಿಕಾವು ದೇವಾಲಯದ ವಂಶ ಪರಂಪರೆ ರಹಿತ ಟ್ರಸ್ಟಿ ನೇಮಕದ ವಿರುದ್ಧದ ಅರ್ಜಿ ವಿಚಾರಣೆ ಮಾಡಿ ಮೇಲಿನಂತೆ ಹೇಳಿದರು.
ಯಾವುದೇ ಪಕ್ಷದ ಕಾರ್ಯ ಚಟುವಟಿಕೆಯಲ್ಲಿರುವವರು ದೇವಾಲಯ ಟ್ರಸ್ಟಿ ಆಗುವಂತಿಲ್ಲ ಎಂದೂ ಹೇಳಿದರು. ಅವರು ರಾಜಕೀಯ ಹುದ್ದೆಗಳಲ್ಲಿ ಇರುವವರು ಅಲ್ಲದೆ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳ ಬಾಕಿ ಇವೆ ಎಂದೂ ಕೋರ್ಟ್ ಅವರನ್ನು ಟ್ರಸ್ಟಿ ಪದವಿಯಿಂದ ಅನರ್ಹಗೊಳಿಸಿ ಹೇಳಿತು.
ಪೂಕೊಟ್ಟುಕಾವು ಸಿಪಿಎಂ ಸಮಿತಿಯ ಕಾರ್ಯದರ್ಶಿ 6ನೇ, ಪೂಕೊಟ್ಟುಕಾವು ಸಿಪಿಎಂ ಕೇಂದ್ರೀಯ ಶಾಖಾ ಕಾರ್ಯದರ್ಶಿ 7ನೇ ಮತ್ತು ಡಿವೈಎಫ್’ಐನ ಮೇಘಲಾ ಕಾರ್ಯದರ್ಶಿ 8ನೆಯ ಪ್ರತಿವಾದಿಗಳಾಗಿ ಹೆಸರಿಸಲಾಗಿತ್ತು.
6 ಮತ್ತು 7ನೇ ಪ್ರತಿವಾದಿಗಳು ನಾವು ಮೊದಲು ಟ್ರಸ್ಟೀಗಳು ಆಗಿದ್ದು, ಆಮೇಲೆ ರಾಜಕೀಯ ಪಕ್ಷದ ಹುದ್ದೆಗೇರಿದ್ದೇವೆ ಎಂದರು. 8ನೇ ಪ್ರತಿವಾದಿಯು ಡಿವೈಎಫ್’ಐ ಒಂದು ರಾಜಕೀಯ ಪಕ್ಷವಲ್ಲವಾದ್ದರಿಂದ ಆಲಯದ ವಂಶ ಪರಂಪರೆಯಾಚಿನ ಟ್ರಸ್ಟಿಯಾಗಿ ನೇಮಕವಾಗಿರುವುದನ್ನು ನೀಗಬಾರದು ಎಂದು ಹೇಳಿದರು.
ಆದರೆ ಕೋರ್ಟು ಪ್ರತಿವಾದಿಗಳ ವಾದವನ್ನು ಒಪ್ಪಲಿಲ್ಲ.
“ಇದು ಸಾಮಾನ್ಯ ಜ್ಞಾನದ ಪ್ರಶ್ನೆ. ರಾಜಕೀಯದಲ್ಲಿ ನೇರ ಒಳಗೊಳ್ಳುವವರು ಸಾರ್ವಜನಿಕ ಸೇವೆಯ ಹುದ್ದೆಯೊಂದಕ್ಕೆ ಸೇರುವುದು ಸರಿಯಲ್ಲ. ಯಾವುದೇ ರಾಜಕೀಯ ಪಕ್ಷವಿರಲಿ ಆತನು ಚುನಾಯಿತ ಇಲ್ಲವೇ ನೇಮಕಾತಿ ರಾಜಕೀಯ ಹುದ್ದೆಯಲ್ಲಿ ಇರುವವರು ವಂಶ ಪರಂಪರೆಯಾಚೆಗಿನ ಟ್ರಸ್ಟಿ ಆಗುವಂತಿಲ್ಲ. 6 ಮತ್ತು 8ನೇ ಪ್ರತಿವಾದಿಗಳು ನಾವು ಸಕ್ರಿಯ ರಾಜಕೀಯದಲ್ಲಿ ಇಲ್ಲ ಎನ್ನುತ್ತಾರೆ. ಇಲ್ಲಿ 6 ಮತ್ತು 7ನೇ ಪ್ರತಿವಾದಿಗಳು ಸಕ್ರಿಯ ರಾಜಕಾರಣಿಗಳಾದರೆ 8ನೇ ಪ್ರತಿವಾದಿ ಡೈಫಿಯ ಸಕ್ರಿಯ ಕಾರ್ಯಕರ್ತರು. ಮೊದಲು ಅನಂತರ ಏನೇ ಆದರೂ ಅವರು ಟ್ರಸ್ಟಿಗಳಾಗಿ ಮುಂದುವರಿಯಲಾಗದು” ಎಂದು ಕೋರ್ಟು ಹೇಳಿತು.
ಆದ್ದರಿಂದ ಅವರ ಸಕ್ರಿಯ ರಾಜಕಾರಣ ಗಮನಿಸಿ ಸದರಿಯವರನ್ನು ಟ್ರಸ್ಟಿ ಪದವಿಯಿಂದ ಅನರ್ಹರಾಗಿಸಿರುವುದಾಗಿ ಉಚ್ಚ ನ್ಯಾಯಾಲಯವು ಹೇಳಿತು.