ಹತ್ಯೆಗೀಡಾಗಿದ್ದ ಮಸೂದ್ ಕುಟುಂಬಕ್ಕೆ ನೂತನ ಮನೆ ಹಸ್ತಾಂತರಿಸಿದ ಮುಸ್ಲಿಂ ಸೆಂಟ್ರಲ್ ಕಮಿಟಿ ಮತ್ತು ಸುಳ್ಯ ತಾಲೂಕು ಜಮಾಅತ್ ಸಮಿತಿ

Prasthutha|

ಸುಳ್ಯ: ಹತ್ಯೆಗೀಡಾಗಿದ್ದ ಮಸೂದ್ ಕುಟುಂಬಕ್ಕೆ ದ.ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಸುಳ್ಯ ತಾಲೂಕು ಜಮಾಅತ್ ಸಮಿತಿ ವತಿಯಿಂದ ನೂತನ ಮನೆ ಹಸ್ತಾಂತರ ಮಾಡಲಾಯಿತು.

- Advertisement -

ಕಳೆದ ಜುಲೈನಲ್ಲಿ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿ ದುಷ್ಕರ್ಮಿಗಳಿಂದ ಮಸೂದ್ ಹತ್ಯೆಗೀಡಾಗಿದ್ದರು. ಮಸೂದ್ ಕುಟುಂಬಕ್ಕೆ ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ. ಎಸ್. ಮಹಮ್ಮದ್ ಮಸೂದ್ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿದರು.

ಮನೆ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಮನೆ ಇಲ್ಲದೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ನಿರ್ಗತಿಕ ಕುಟುಂಬ ಸಂಕಷ್ಟದಲ್ಲಿದ್ದಾಗ ಜಾತಿ ಮತ ಭೇದ ಇಲ್ಲದೆ ನೆರವಿಗೆ ಧಾವಿಸಿ ಸಾಂತ್ವನ ಹೇಳಿ ಸಹಾಯ ಮಾಡಿ ಮಾನವೀಯತೆ ಮೆರೆದ ಎಲ್ಲರಿಗೂ ನಮ್ಮ ಅಭಿನಂದನೆಗಳು. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಪರಸ್ಪರ ಸೌಹಾರ್ದತೆ ಯಿಂದ ದೇಶದ ಜಾತ್ಯತೀತ ಮೌಲ್ಯದ ಸೌಂದರ್ಯ ವರ್ಧಿಸಲು ಪ್ರಯತ್ನಿಸೋಣ ಎಂದು ಹೇಳಿದರು.

- Advertisement -

ಈ ಸಂದರ್ಭದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್, ಪುತ್ತುಬಾವ ಹಾಜಿ, ಹಾಜಿ ಕೆ. ಪಿ. ಅಹ್ಮದ್ ಆಕರ್ಷನ್ ಪುತ್ತೂರು, ಸಂಘಟನಾ ಕಾರ್ಯದರ್ಶಿಗಳಾದ ಎಸ್. ಸಂಶುದ್ದೀನ್ ಸುಳ್ಯ, ಅಬ್ದುಲ್ ರೆಹಮಾನ್ ಆಜಾದ್, ಕಾರ್ಯದರ್ಶಿ ಕಾನೂನು ಸಲಹೆಗಾರ ನೂರುದ್ದೀನ್ ಸಾಲ್ಮರ, ಕೆಪಿಸಿಸಿ ಮಾಧ್ಯಮ ವಕ್ತಾರ ಟಿ. ಎಂ ಶಾಹಿದ್ ತೆಕ್ಕಿಲ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ. ಎಂ ಮುಸ್ತಾಫ, ಜನತಾದಳ ಜಾತ್ಯತೀತ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ಎಐಕೆಎಂಸಿಸಿ ದ. ಕ. ಜಿಲ್ಲಾ ಖಜಾಂಚಿ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಜಾವಗಲ್ ಶರೀಫ್ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಪಿ. ಎ. ಮಹಮ್ಮದ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ಗಫೂರ್, ಕಲ್ಮಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಜಿರ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಜಿ. ಕೆ ಸುಳ್ಳ ಅಲ್ಪಸಂಖ್ಯಾತರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿ ನಂಗಡಿ, ಜಾಲ್ಸೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ನಡುವಡ್ಕ, ಅಡ್ವೋಕೇಟ್ ಮೂಸಾಕುಞಿ ಪೈoಬಚ್ಚಾಲ್, ಜಾಲ್ಸೂರು ಮಸೀದಿ ಅಧ್ಯಕ್ಷ ಉಸ್ಮಾನ್ ಜಿ. ಎಂ ಮೊಗರ್ಪಣೆ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ ಸೀ ಫುಡ್, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುಸ್ತಫಾ ಕಲ್ಪಣೆ, ಅನ್ಸಾರಿಯಾ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಶಾಫಿ ಕುತ್ತಾಮೊಟ್ಟೆ, ಉದ್ಯಮಿಗಳಾದ ಸಿದ್ದೀಕ್ ಕೊಕ್ಕೊ, ಹಾಜಿ ಮೂಸ ಕಲ್ಪ ಣೆ, ಮತ್ತು ಮಸೂದ್ ಕುಟುಂಬಸ್ಥರು ಉಪಸ್ಥಿತರಿದ್ದರು.

ಸೆಂಟ್ರಲ್ ಕಮಿಟಿಯಿಂದ ನೀಡಿದ ರೂ 30 ಲಕ್ಷ, ತಾಲೂಕು ಜಮಾಅತ್ ಮತ್ತು ದಾನಿಗಳು ನೀಡಲಾದ ಮೊತ್ತದಲ್ಲಿ ಸುಳ್ಯ ತಾಲೂಕು ಬೆಳ್ಳಾರೆ ಎಂಬಲ್ಲಿ ಮನೆ ನಿರ್ಮಿಸಿ, ಉಳಿಕೆ ಮೊತ್ತದಲ್ಲಿ
ಸಹೋದರಿಯ ಮದುವೆಗೆ ಚಿನ್ನಾಭರಣ ಖರೀದಿಸುವ ಯೋಜನೆ ರೂಪಿಸಲಾಗಿತ್ತು. ಮನೆ ಪೂರ್ಣಗೊಂಡು ಇಂದು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.



Join Whatsapp