ಬ್ರೆಜಿಲ್: ಪ್ರವಾಹ, ಭೂಕುಸಿತಕ್ಕೆ ಸಿಲುಕಿ 26 ಮಂದಿ‌ ದುರ್ಮರಣ

Prasthutha|

ಬ್ರೆಜಿಲ್‌ನ ಬಡಗಣ ಭಾಗದ ಸಾವೋ‌ಪಾಲೋ ರಾಜ್ಯದ ಸುತ್ತ ಭಾರೀ ಪ್ರವಾಹ ಉಂಟಾಗಿದ್ದು, ಮನೆಗಳ ತುದಿಯ ಹೊರತು ಇನ್ನೇನೂ ಕಾಣಿಸುತ್ತಿಲ್ಲ ಎಂದು ಸೆಬಾಸ್ಟಿಯೋವಾ ಮೇಯರ್ ಪಿಲಿಫ್ ಆಗಸ್ಟ್ ದೃಶ್ಯಗಳನ್ನು ಹೊರಬಿಟ್ಟಿದ್ದು ಸೇನೆಯ ನೆರವನ್ನು ಕೋರಿದ್ದಾರೆ.

- Advertisement -

ಭಾನುವಾರ ಒಂದೇ ದಿನ 600 ಮಿಮೀ ಮಳೆ ಬಂದಿದೆ. ಬರ್ಟಿಯೋವಾದಲ್ಲಿ ಅತಿ ಹೆಚ್ಚು 687 ಮಿಮೀ ಮಳೆ ಒಂದೇ ದಿನದಲ್ಲಿ ಆಗಿದೆ. ಇಲ್ಲಿ ಭೂಕುಸಿತದಿಂದ 26 ಮಂದಿ ಸಾವಿಗೀಡಾಗಿದ್ದಾರೆ.

ಬರ್ಟಿಯೋವಾ, ಸೆಬಾಸ್ಟಿಯೋವಾ ಉತ್ಸವ ರದ್ದಾಗಿದೆ. ಪ್ರವಾಹದಿಂದ ಆದ ಹಾನಿ ಇತ್ಯಾದಿ ಇನ್ನಷ್ಟೇ ತಿಳಿಯಬೇಕಾಗಿದೆ. ಎರಡು ವಿಮಾನ ಮತ್ತು ಬೋಟುಗಳು ಪರಿಹಾರ ಕಾರ್ಯಾಚರಣೆ ಆರಂಭಿಸಿವೆ.



Join Whatsapp