ಫೆಬ್ರವರಿ 20 ರಿಂದ ಮಾರ್ಚ್ 2 ರವರೆಗೆ ಕಿನ್ಯ ಮಖಾಂ ಝಿಯಾರತ್

Prasthutha|

ಉಳ್ಳಾಲ ತಾಲೂಕು ಕಿನ್ಯ ಕೇಂದ್ರ ಜುಮ್ಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಜ್ರತ್ ವಲಿಯುಲ್ಲಾಹಿ ಹುಸೈನ್ ಮುಸ್ಲಿಯಾರ್ (ಖ.ಸಿ.) ರವರ ಹೆಸರಿನಲ್ಲಿ ಮುಖಾಂ ಕೂಟು ಝಿಯಾರತ್ ಕಾರ್ಯಕ್ರಮವು ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಸಿ. ಇಸ್ಮಾಯಿಲ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 20 ರಿಂದ ಮಾರ್ಚ್ 2 ರ ವರೆಗೆ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

- Advertisement -


ಇದರ ಉದ್ಘಾಟನಾ ಕಾರ್ಯಕ್ರಮ ವು ಫೆಬ್ರವರಿ 20 ಸೋಮವಾರ ರಾತ್ರಿ ನಡೆಯಲಿದ್ದು, ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುಆ ನೆರವೇರಿಸಲಿದ್ದಾರೆ. ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ ಮುಖ್ಯ ಭಾಷಣ ಮಾಡಲಿದ್ದಾರೆ. ಕುತುಬಿಯ ಮದ್ರಸ ಸದರ್ ಮುಅಲ್ಲಿಂ ಫಾರೂಕ್ ದಾರಿಮಿ, ಕೂಟು ಝಿಯಾರತ್ ಸಮಿತಿ ಅಧ್ಯಕ್ಷ ಕೆ.ಎಂ.ಮೊಯ್ದಿನ್ ಕುಂಞಿ ಅಬ್ಬು, ಕೇಂದ್ರ ಜುಮ್ಮಾ ಮಸೀದಿ ಕಾರ್ಯದರ್ಶಿ ಕೆ.ಎಸ್.ಅಬ್ದುಲ್ ಖಾದರ್ ಹಾಜಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಹಮ್ಮದ್ ರಹಮತ್ ನಗರ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಫೆಬ್ರವರಿ 21ಮಂಗಳವಾರ ರಾತ್ರಿ ಪೊಯ್ಯತ್ತಬೈಲ್ ಮುದರ್ರಿಸ್ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಕಿನ್ಯ ಕುತುಬಿಯ ಮದ್ರಸ ಸಹಾಯಕ ಸದ್ ರ್ ಅಲೀ ಫೈಝಿ ಉಪಸ್ಥಿತರಿರಲಿದ್ದಾರೆ ಎಂದರು.


ಫೆಬ್ರವರಿ 22 ಬುಧವಾರ ರಾತ್ರಿ ರಫೀಕ್ ಸ ಅದಿ ದೇಲಂಪಾಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮೀಂಪ್ರಿ ಮಸೀದಿ ಇಮಾಮ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಭಾಗವಹಿಸಲಿದ್ದಾರೆ. ಫೆಬ್ರವರಿ 23 ಗುರುವಾರ ರಾತ್ರಿ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಧಾರ್ಮಿಕ ಉಪನ್ಯಾಸ ನೀಡಲಿದ್ದು, ರಹಮತ್ ಮಸೀದಿ ಇಮಾಮ್ ಇಸ್ಮಾಯಿಲ್ ದಾರಿಮಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಫೆಬ್ರವರಿ 24 ಅಶ್ರಫ್ ರಹ್ಮಾನಿ ಚೌಕಿ ಧಾರ್ಮಿಕ ಉಪನ್ಯಾಸ ನೀಡಲಿಮುದ್ದಾರೆ. ಫೆಬ್ರವರಿ 25 ಶನಿವಾರ ರಾತ್ರಿ ನಂದಾವರ ಮುದರ್ರಿಸ್ ಖಾಸಿಂ ದಾರಿಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಕುತುಬಿನಗರ ಮಸೀದಿ ಖತೀಬ್ ಅಬ್ದು ರ್ರಝಾಕ್ ಮದನಿ ಉಪಸ್ಥಿತರಿರಲಿದ್ದಾರೆ. ಫೆಬ್ರವರಿ 26 ಭಾನುವಾರ ರಾತ್ರಿ ಅಬ್ದುಲ್ ಕರೀಂ ಕುಂತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಫೆಬ್ರವರಿ 27 ಸೋಮವಾರ ರಾತ್ರಿ ನೌಫಲ್ ಸಖಾಫಿ ಕಳಸ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಬೆಳರಿಂಗೆ ಮಸೀದಿ ಇಮಾಮ್ ಉಮರ್ ಅಝ್ಹರಿ ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.
ಫೆಬ್ರವರಿ 28 ಮಂಗಳವಾರ ರಾತ್ರಿ ಖಲೀಲ್ ಹುದವಿ ಅಲ್ ಮಾಲಿಕಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಉಕ್ಕುಡ ಮಸೀದಿ ಖತೀಬ್ ಇಬ್ರಾಹಿಂ ದಾರಿಮಿ ಉಪಸ್ಥಿತರಿರಲಿದ್ದಾರೆ.ಮಾರ್ಚ್ 1 ಬುಧವಾರ ರಾತ್ರಿ ಮುನೀರ್ ಹುದವಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾರ್ಚ್ 2 ಗುರುವಾರ ರಾತ್ರಿ ಕೂಟು ಝಿಯಾರತ್ ಕಾರ್ಯಕ್ರಮ ನಡೆಯಲಿದ್ದು, ಸಯ್ಯದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಪ್ರಿ ಮುತ್ತು ಕೋಯ ತಂಙಳ್ ಉದ್ಘಾಟಿಸಲಿದ್ದಾರೆ.ಸಯ್ಯಿದ್ ಇಬ್ರಾಹಿಂ ಖಲೀಲ್ ತಂಙಳ್ ಕಡಲುಂಡಿ ದುಆ ನೆರವೇರಿಸಲಿದ್ದಾರೆ.ಮಂಜನಾಡಿ ಮಸೀದಿ ಮುದರ್ರಿಸ್ ಪಿ.ಎ.ಅಹ್ಮದ್ ಬಾಖವಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಹೇಳಿದರು.

- Advertisement -


ಸಯ್ಯದ್ ಇಬ್ರಾಹಿಂ ಬಾತಿಷ ತಂಙಳ್ ಆನೆಕಲ್ಲು, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿನ್ಯ, ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ, ಶಾಸಕ ಯುಟಿ ಖಾದರ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪಿ ಟಿ ಸಿ ಮೊಹಮ್ಮದಾಲಿ ಮುಸ್ಲಿಯಾರ್,ನೌಫಲ್ ಫೈಝಿ, ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಕೋಶಾಧಿಕಾರಿ ಬಾವು ಹಾಜಿ ಸಾಗ್ ಬಾಗ್, ಪ್ರಧಾನ ಕಾರ್ಯದರ್ಶಿ ಕೆ.ಐ.ಮುಹಮ್ಮದ್, ಕೂಟು ಝಿಯಾರತ್ ಸಮಿತಿ ಕೋಶಾಧಿಕಾರಿ ಮುಹಮ್ಮದ್ ನಡಿದಾರಿ ಉಪಸ್ಥಿತರಿರಲಿದ್ದಾರೆ ಎಂದು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆ.ಎಮ್ ಮೊಯಿದಿನ್ ಕುಂಞಿ ಅಬ್ಬು, ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಕೋಶಾಧಿಕಾರಿ ಬಾವು ಹಾಜಿ ಸಾಗ್ ಬಾಗ್, ಪ್ರಧಾನ ಕಾರ್ಯದರ್ಶಿ ಕೆ.ಐ.ಮುಹಮ್ಮದ್, ಕೂಟು ಝಿಯಾರತ್ ಸಮಿತಿ ಕೋಶಾಧಿಕಾರಿ ಮುಹಮ್ಮದ್ ನಡುದಾರಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



Join Whatsapp