ಚಂಡೀಗಡ: ಇಬ್ಬರು ಮುಸ್ಲಿಮ್ ಯುವಕರನ್ನು ಗ್ರಾಮದಿಂದ ಅಪಹರಿಸಿದ ಬಜರಂಗದಳದ ಕಾರ್ಯಕರ್ತರು, ಇಬ್ಬರಿಗೂ ಬೆಂಕಿ ಹಚ್ಚಿ ಕೊಂದ ದಾರುಣ ಘಟನೆ ಹರ್ಯಾಣದ ಮನೇಸ್ ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರ ಮೃತದೇಹ ಅವರು ಪ್ರಯಾಣಿಸುತ್ತಿದ್ದ ಬೊಲೆರೊ ಕಾರಿನಲ್ಲಿ ಪತ್ತೆಯಾಗಿವೆ.
ಜಾನುವಾರು ಹತ್ಯೆ ಮಾಡುವವರು ಎಂದು ಆರೋಪಿಸಿ ಎರಡು ದಿನಗಳ ಹಿಂದೆ ಅವರನ್ನು ಬಜರಂಗದಳದ ಕಾರ್ಯಕರ್ತರು ಗ್ರಾಮದಿಂದ ಅಪಹರಿಸಿದ್ದರು.
ರಾಜಸ್ಥಾನದ ಭರತ್’ಪುರದ ಗೋಪಾಲ್’ಗಢ ಪೊಲೀಸ್ ಠಾಣೆಯಲ್ಲಿ ಬಜರಂಗ ದಳದ ಕಾರ್ಯಕರ್ತರಾದ ಮೋನು ಮನೇಸರ್, ಲೋಕೇಶ್, ರಿಂಕು ಸೈನಿ, ಶ್ರೀಕಾಂತ್ ವಿರುದ್ಧ ಸೆಕ್ಷನ್ 143, 365, 367, ಮತ್ತು 368 ಅಡಿಯಲ್ಲಿ ಎಫ್’ಐಆರ್ ದಾಖಲಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ, ಗುರುಗ್ರಾಮದ ನೂಹ್ ಎಂಬಲ್ಲಿ ವಾರಿಸ್ ಎಂಬ 21 ವರ್ಷದ ವ್ಯಕ್ತಿಯನ್ನು ಕೊಂದ ಆರೋಪ ಮೋನು ಮನೇಸರ್ ಮೇಲಿತ್ತು. ಮೋನು ಮನೇಸರ್ ನೇತೃತ್ವದ ಗೋರಕ್ಷಕರ ಹೆಸರಿನ ಗೂಂಡಾಗಳು ವಾರಿಸ್’ನನ್ನು ಕೊಂದಿದ್ದರೆ ಎಂದು ಅವರ ಕುಟುಂಬ ಆರೋಪಿಸಿದೆ, ಆದಾಗ್ಯೂ, ಅಪಘಾತಕ್ಕೊಳಗಾಗಿ ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿ ಪೊಲೀಸರು ಆರೋಪಿಗಳನ್ನು ಬಿಡುಗಡೆ ಮಾಡಿದ್ದರು.
Two Muslim men, Junaid and Nasir, were allegedly kidnapped from Ghatmika, Rajasthan two days ago by members of the Bajrang Dal on the pretext of cow slaughter. The locals attempted to file a FIR at the police stations in Pahadi and Gopalgarh, but the FIR was not filed. + pic.twitter.com/TVNIlMUx7a
— Meer Faisal (@meerfaisal01) February 16, 2023