ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ 1 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ತಾಪಮಾನ ದಾಖಲಾಗಿ, ಕೊರೆವ ಚಳಿಯಲ್ಲಿ ಗಡಗಡ ನಡುಗುವಂತಿದ್ದರೂ, ಪ್ರಧಾನಿ ಮೋದಿ ಸರಕಾರದ ವಿರುದ್ಧದ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದ್ದಾರೆ.
ದೆಹಲಿಯಲ್ಲಿ 15 ವರ್ಷಗಳಲ್ಲಿ ಹೊಸ ವರ್ಷದ ದಿನ (ಜ.1)ರಂದು 1 ಡಿಗ್ರಿ ಸೆಲ್ಸಿಯಸ್ ಗಿಂತಲೂ ತಾಪಮಾನ ಕಡಿಮೆಯಾಗಿದ್ದು ಇದೇ ಮೊದಲು. ಕೊರೆವ ಚಳಿಯಿದ್ದರೂ, ರಸ್ತೆಗಳಲ್ಲೇ ಬೀಡುಬಿಟ್ಟಿರುವ ಪ್ರತಿಭಟನಕಾರರು ಇಂದು ಟೆಂಟ್ ಗಳಿಂದ ಹೊರಬರಲಾಗದೆ ಪರದಾಡಿದರು.
ಕಳೆದ ಒಂದು ತಿಂಗಳಿನಿಂದ ರೈತರು ಪ್ರಧಾನಿ ಮೋದಿ ಸರಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆದ್ದಾರಿಗಳಲ್ಲೇ ಟೆಂಟ್ ಹಾಕಿ ರೈತರು ಆಶ್ರಯ ಪಡೆದಿದ್ದಾರೆ. ಇಷ್ಟೊಂದು ತೀವ್ರ ಚಳಿಯಿದ್ದರೂ, ತಮ್ಮ ಹೋರಾಟದ ಹಿಂದೆ ಸರಿಯದ ರೈತರ ಆಕ್ರೋಶ ಸರಕಾರದ ವಿರುದ್ಧ ಎಷ್ಟು ಮಡುಗಟ್ಟಿದೆ ಎಂಬುದನ್ನು ಅಂದಾಜಿಸಬಹುದು.