ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ, ಆರೋಗ್ಯವರ್ಧಕವೆಂದು ಸಾಬೀತು: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಅಡಕೆ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳಿವೆ ಎಂದು ತಜ್ಞರ ಸಂಶೋಧನಾ ವರದಿಯಿಂದ ವೇದ್ಯವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ವಿಧಾನ ಪರಿಷತ್’ನಲ್ಲಿ ತಿಳಿಸಿದರು.

- Advertisement -

ಸಚಿವರು ಇಂದು ವಿಧಾನ ಪರಿಷತ್ತಿನಲ್ಲಿ ಗಮನ ಸೆಳೆವ ಸೂಚನೆಗೆ ಉತ್ತರವಾಗಿ ಮಾತನಾಡುತ್ತ ಈ ವಿಷಯ ತಿಳಿಸಿದ್ದು, ಪ್ರತಿಷ್ಠಿತ ಎಂ. ಎಸ್. ರಾಮಯ್ಯ ವಿಶ್ವವಿದ್ಯಾಲಯದ  ಸಂಸ್ಥೆ ಈ ಕುರಿತು ಸಂಶೋಧನೆ ನಡೆಸಿದ್ದು, ಸದ್ಯದಲ್ಲಿಯೇ, ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನಿಯತ ಕಾಲಿಕಾದಲ್ಲಿ ಪ್ರಕಟಣೆ ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯು ನಡೆಸಿದ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಅಡಿಕೆ ತೀವ್ರತರದ ಗಾಯವನ್ನು ಗುಣಪಡಿಸುವ, ಮಧುಮೇಹ ಸಮಸ್ಯೆಯ ನಿಯಂತ್ರಣ, ಹೃದಯ ಸಂಬಂಧಿತ ಕಾಯಿಲೆಗಳು, ಉದರದ ಅಲ್ಸರ್ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ, ಆಶಾದಾಯಿಕ ಫಲಿತಾಂಶಗಳು ಬಂದಿವೆ ಎಂದು ನುಡಿದರು.

- Advertisement -

ಸುಪ್ರೀಂ ಕೋರ್ಟಿನಲ್ಲಿ ಅಡಕೆ ಸೇವನೆಯಿಂದ ಆಗುವ ಆರೋಗ್ಯ ಲಾಭಗಳ ಕುರಿತು ಕಂಡು ಬಂದಿರುವ ಸಂಶೋಧನಾ ಫಲಿತಾಂಶ  ವರದಿಗಳನ್ನು ಸಲ್ಲಿಸಲಾಗುವುದು ಎಂದೂ ಸದನಕ್ಕೆ ತಿಳಿಸಿದರು.



Join Whatsapp