ಪೂನಾದ ಗೂಗಲ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಕರೆ; ಹೈದರಾಬಾದ್ ನಿವಾಸಿಯ ಬಂಧನ

Prasthutha|


ಪೂನಾ: ಪೂನಾದ ಮುಂದ್ವಾ ಪ್ರದೇಶದ ವಾಣಿಜ್ಯ ಕಟ್ಟಡದಲ್ಲಿರುವ ಗೂಗಲ್ ಪ್ರಾದೇಶಿಕ ಕಚೇರಿಗೆ ಇಂದು ಹುಸಿ ಬಾಂಬ್ ಕರೆ ಮಾಡಲಾಗಿದ್ದು, ಇದರಿಂದ ಕಚೇರಿಯಲ್ಲಿ ಕೆಲ ಕಾಲ ಆತಂಕ ವಾತಾವರಣ ಸೃಷ್ಟಿಯಾಗಿತ್ತು.

- Advertisement -


ಮಹಾರಾಷ್ಟ್ರದ ಪೂನಾದಲ್ಲಿರುವ ಗೂಗಲ್ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಫೆಬ್ರವರಿ 12ರ ರಾತ್ರಿ ಕರೆ ಬಂದುದರಿಂದ ಎಲ್ಲೆಡೆ ಆತಂಕ ಸೃಷ್ಟಿಯಾಗಿತ್ತು. ಕೂಡಲೆ ಪೊಲೀಸರು, ಬಾಂಬು ನಿಷ್ಕ್ರಿಯ ದಳದ ಜೊತೆಗೆ ಆಗಮಿಸಿ ಪರಿಶೀಲಿಸಿದಾಗ ಅದು ಹುಸಿ ಕರೆ ಎಂಬುದು ಸ್ಪಷ್ಟವಾಯಿತು. ಹೈದರಾಬಾದಿನ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಈ ಕರೆ ಮಾಡಿರುವುದು ತಿಳಿದು ಬಂದು, ಆ ವ್ಯಕ್ತಿಯನ್ನು ಬಳಿಕ ಬಂಧಿಸಲಾಗಿದೆ.

“ಪೂನಾದ ಮುಂದ್ವಾ ಪ್ರದೇಶದ ವಾಣಿಜ್ಯ ಕಟ್ಟಡವೊಂದರ 11ನೇ ಮಹಡಿಯಲ್ಲಿ ಗೂಗಲ್ ಕಚೇರಿಯಿದೆ. ಭಾನುವಾರ ರಾತ್ರಿ ಕಚೇರಿಯೊಳಗೆ ಬಾಂಬ್ ಇಟ್ಟಿರುವುದಾಗಿ ಕರೆ ಬಂದಿತ್ತು ಎಂದು 5ನೇ ವಲಯದ ಪೊಲೀಸ್ ಉಪ ಆಯುಕ್ತ ವಿಕ್ರಾಂತ್ ದೇಶಮುಖ್ ಹೇಳಿದರು.

- Advertisement -


ಕೆಲಸಗಾರರಿಗೆ ಕೂಡಲೆ ಎಚ್ಚರಿಕೆ ನೀಡಿ ಹೊರಗೆ ಕಳುಹಿಸಿ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಹೋಗಿ ತೀವ್ರ ತಪಾಸಣೆ ನಡೆಸಲಾಯಿತು ಎಂದೂ ಅವರು ಹೇಳಿದರು.


“ಅದು ಹುಸಿ ಕರೆ ಎಂಬುದು ಶೋಧ ಕಾರ್ಯದ ಬಳಿಕ ಸ್ಪಷ್ಟವಾಯಿತು. ಕರೆ ಮಾಡಿದ ವ್ಯಕ್ತಿ ಹೈದಾರಾಬಾದಿನವನೆಂಬುದನ್ನು ಕಂಡುಕೊಂಡು ಬಂಧನಕ್ಕೆ ತಿಳಿಸಲಾಯಿತು. ವ್ಯಕ್ತಿ ಕುಡಿದ ಅಮಲಿನಲ್ಲಿ ಕರೆ ಮಾಡಿರುವುದು ಮೊದಲ ತನಿಖೆಯಿಂದ ಗೊತ್ತಾಗಿದೆ” ಎಂದು ವಿಕ್ರಾಂತ್ ದೇಶಮುಖ್ ಹೇಳಿದರು.


ತನಿಖೆ ಮುಂದುವರಿದಿದೆ ಎಂದೂ ಅವರು ತಿಳಿಸಿದರು.



Join Whatsapp