ಟರ್ಕಿ ಭೂಕಂಪ| 34 ಸಾವಿರ ದಾಟಿದ ಸಾವಿನ ಸಂಖ್ಯೆ; ಕಟ್ಟಡ ಗುತ್ತಿಗೆದಾರರಿಗೆ ಅರೆಸ್ಟ್ ವಾರೆಂಟ್!

Prasthutha|

ಹೊಸದಿಲ್ಲಿ: ಸಿರಿಯಾ-ಟರ್ಕಿ ಭೂಕಂಪದಲ್ಲಿ ಭಾನುವಾರದ ಅಂತ್ಯದ ವೇಳೆಗೆ ಒಟ್ಟು 34 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

- Advertisement -

ಟರ್ಕಿ ದೇಶವೊಂದರಲ್ಲೇ 30 ಸಾವಿರದಷ್ಟು ಮಂದಿ ಮೃತಪಟ್ಟಿದ್ದು, ಸಿರಿಯಾದಲ್ಲಿ ಸಾವಿನ ಸಂಖ್ಯೆ 4 ಸಾವಿರ ದಾಟಿದೆ. ಭೂಕಂಪದಿಂದ ಕುಸಿದ ಹಲವು ಕಟ್ಟಡಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಇದೆ.

ವರದಿಗಳ ಪ್ರಕಾರ, ಟರ್ಕಿ ಮತ್ತು ಸಿರಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ. ದುರ್ಬಲ ಕಟ್ಟಡಗಳ ನಿರ್ಮಾಣವೇ ಈ ರೀತಿಯ ಕುಸಿತಕ್ಕೆ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಈ ವಿಚಾರವನ್ನು ಟರ್ಕಿ ಆಡಳಿತ ಗಂಭೀರವಾಗಿ ಪರಿಗಣಿಸಿದ್ದು, ಕಟ್ಟಡ ಗುತ್ತಿಗೆದಾರರಿಗೆ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ.



Join Whatsapp