ಮಂಗಳೂರು: 2023ನೇ ಸಾಲಿನ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಪೂರಕ ನೆರವು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ನಗರದ ಬಂದರ್‌ನಲ್ಲಿರುವ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಕಚೇರಿಯಲ್ಲಿ ಪೂರಕ ನೆರವು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಆಗಮಿಸುವ ವೇಳೆ ಪಾಸ್‌ಪೋರ್ಟ್ ಹಾಗೂ ಅದರ 2 ಪ್ರತಿ, 2 ಪಾಸ್‌ಪೋರ್ಟ್ ಸೈಝ್ ಫೋಟೊ (ಸ್ಟೀನ್ ವೈಟ್), ಆಧಾರ್ ಕಾರ್ಡ್, ಪಾನ್ ಕಾರ್ಡ್, ಕೋವಿಡ್ ಲಸಿಕೆ ಹಾಕಿಸಿದ ಪ್ರಮಾಣಪತ್ರ, ಬ್ಯಾಂಕ್ ಚೆಕ್ ಅಥವಾ ಪಾಸ್‌ಪುಸ್ತಕದ ಪ್ರತಿ, ರಕ್ತದ ಗುಂಪಿನ ಪ್ರತಿಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂ: 9141941415, 7019079044,
9916647651ನ್ನು ಸಂಪರ್ಕಿಬಹುದು ಎಂದು ತಿಳಿಸಲಾಗಿದೆ.