ಕೊಚ್ಚಿ : ಒಂದು ಕಾಲದಲ್ಲಿ ತಾನು ಕಸಗುಡಿಸಿ, ಧೂಳು ಹಿಡಿದ ಖುರ್ಚಿಗಳನ್ನು ಸ್ವಚ್ಛಗೊಳಿಸುತ್ತಿದ್ದ ಪಂಚಾಯತ್ ನಲ್ಲಿಯೇ ಮಹಿಳೆಯೊಬ್ಬರು ಇಂದು ಅಧ್ಯಕ್ಷೆ ಸ್ಥಾನಕ್ಕೇರಿದ್ದಾರೆ. ಇದು ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದೇ ಹೇಳಬಹುದು.
ದಕ್ಷಿಣ ಕೇರಳದ ಕೊಲ್ಲಂ ಜಿಲ್ಲೆಯ ಎ. ಆನಂದವಳ್ಳಿ (40) ಎಂಬಾಕೆ ಅಲ್ಲಿನ ಪದಣಪುರಂ ಬ್ಲಾಕ್ ಪಂಚಾಯತಿ ಅಧ್ಯಕ್ಷೆಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಆನಂದವಳ್ಳಿ ಸಿಪಿಎಂನಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಆನಂದವಳ್ಳಿ 10 ವರ್ಷದಿಂದ ಬ್ಲಾಕ್ ಪಂಚಾಯತಿಯಲ್ಲಿ ಸ್ವಚ್ಛತಾ ಕರ್ಮಿಯಾಗಿ ಕೆಲಸ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಇದೀಗ ಅವರು ಬ್ಲಾಕ್ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿರುವುದರಿಂದ, ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದಾರೆ.
ಆನಂದವಳ್ಳಿ ಅವರ ಪತಿ ಪೈಂಟರ್ ಕೆಲಸ ಮಾಡುತ್ತಿದ್ದು, ಇಬ್ಬರೂ ಸಿಪಿಎಂನಲ್ಲಿ ತೊಡಗಿಸಿಕೊಂಡಿದ್ದವರು. 2,000 ರೂ. ವೇತನದ ತಮ್ಮ ತಾತ್ಕಾಲಿಕ ಉದ್ಯೋಗಕ್ಕೆ ರಾಜೀನಾಮೆ ನೀಡಿ ಈಗ ಆನಂದವಳ್ಳಿ ಅಧ್ಯಕ್ಷೆಯಾಗಿ ಅಧಿಕಾರಕ್ಕೇರಿದ್ದಾರೆ.