ತರಗತಿಯಲ್ಲಿ ಕುಳಿತುಕೊಳ್ಳುವ ಜಾಗದ ಕುರಿತು ತಗಾದೆ | ಸಹಪಾಠಿಯನ್ನೇ ಗುಂಡಿಕ್ಕಿ ಕೊಂದ 10ನೇ ತರಗತಿ ವಿದ್ಯಾರ್ಥಿ

Prasthutha|

ಲಖನೌ : ತರಗತಿ ಕೋಣೆಯೊಂದರಲ್ಲಿ ಕುಳಿತುಕೊಳ್ಳುವ ವಿಚಾರದಲ್ಲಿ ನಡೆದ ವಾಗ್ವಾದವೊಂದು ತನ್ನ ಸಹಪಾಠಿಯನ್ನೇ ಬಲಿ ಪಡೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಹಪಾಠಿಯ ಜೊತೆ ತರಗತಿಯಲ್ಲಿ ಕುಳಿತುಕೊಳ್ಳುವ ವಿಚಾರದಲ್ಲಿ ನಡೆದ ವಾಗ್ವಾದದ ಹಿನ್ನೆಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯು ತನ್ನ ಅಂಕಲ್ ಗೆ ಸೇರಿದ ಪಿಸ್ತೂಲ್ ನಲ್ಲಿ ಸಹಪಾಠಿ ಮೇಲೆ ಗುಂಡು ಹಾರಿಸಿದ್ದಾನೆ.

- Advertisement -

ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿಗಳಿಬ್ಬರ ನಡುವೆ ಬುಧವಾರ ಕುಳಿತುಕೊಳ್ಳುವ ಜಾಗದ ಬಗ್ಗೆ ವಾಗ್ವಾದ ನಡೆದಿತ್ತು. ಇದರಿಂದ ಆಕ್ರೋಶಿತನಾದ ಓರ್ವ ವಿದ್ಯಾರ್ಥಿ ಮನೆಗೆ ಬಂದು, ಗುರುವಾರ ಮುಂಜಾನೆ ತನ್ನ ಅಂಕಲ್ ನ ಪಿಸ್ತೂಲ್ ತೆಗೆದುಕೊಂಡು ಹೋಗಿ ಸಹಪಾಠಿಗೆ ಗುಂಡಿಕ್ಕಿದ್ದಾನೆ. ಇಬ್ಬರು ವಿದ್ಯಾರ್ಥಿಗಳೂ 14ರ ವಯಸ್ಸಿನವರಾಗಿದ್ದಾರೆ.



Join Whatsapp