ವಾಷಿಂಗ್ಟನ್: ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಕೆಲಸದ ಹಿನ್ನಡೆ ಪರಿಣಾಮವಾಗಿ ತನ್ನ ಸಿಬ್ಬಂದಿಯ 12%ರಷ್ಟು ಎಂದರೆ 1,000 ಸಿಬ್ಬಂದಿಯನ್ನು ಈ ಒಂದು ವಾರಾವಧಿಯಲ್ಲಿ ತೆಗೆದು ಹಾಕಲು ಯಾಹೂ ಇನ್ಕ್.ಕಾಮ್ ತೀರ್ಮಾನಿಸಿದೆ ಎಂದು ಆ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಅಪೋಲೋ ಗ್ಲೋಬಲ್ ಮ್ಯಾನೇಜ್ ಮೆಂಟ್ ಇನ್ಕ್ ಮಾಲಿಕತ್ವದ ಯಾಹೂ ಹಿನ್ನಡೆ ಕಾಣುತ್ತಿದ್ದು 2023ರ ಅಂತ್ಯದೊಳಗೆ ಒಟ್ಟಾರೆ 20%ದಿಂದ 50%ದವರಗೆ ಕೂಡ ಸಿಬ್ಬಂದಿ ಕಡಿತ ಮಾಡಲೇಬೇಕಾಗಿದೆ ಎಂದು ಸಹ ಅವರು ಹೇಳಿದ್ದಾರೆ.
“ಈ ಬದಲಾವಣೆಯನ್ನು ಇಂದು ಘೋಷಿಸಿರುವುದು ಕಂಪೆನಿಯೊಳಗಿನ ತೀರ್ಮಾನವಾಗಿದ್ದು, ಇನ್ನೂ ಹೆಚ್ಚಿನ ಗುಣಮಟ್ಟದ ಸೇವೆಯೊಡನೆ ನಮ್ಮ ವ್ಯವಹಾರವು ಮುಂದುವರಿಯುತ್ತದೆ” ಎಂದು ಮುಖ್ಯ ಕಾರ್ಯಕಾರಿ ಅಧಿಕಾರಿ ಜಿಮ್ ಲಾಂಜೋನ್ ಗುರುವಾರದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
“ಕಳೆದೆರಡು ವರ್ಷಗಳಿಂದ ಕಂಪೆನಿಯು ಕೆಲಸದಲ್ಲಿ ಸುಧಾರಿಸಿಕೊಳ್ಳಲು ಯತ್ನಿಸಿದೆ. ಇಂತಹ ಬಿಕ್ಕಿಟ್ಟಿನ ಸ್ಥಿತಿಯಲ್ಲಿ ಒಂಟಿಯಾಗಿ ನಮ್ಮ ಕಂಪೆನಿಯು ತನ್ನ ಸಂಪನ್ಮೂಲವನ್ನು ಬಳಸಿಕೊಳ್ಳಲು ಇರುವ ದಾರಿಯಿದು” ಎಂದೂ ಅವರು ಹೇಳಿದರು.
ಎಲ್ಲ ಡಿಜಿಟಲ್ ವ್ಯವಹಾರದ ಕಂಪೆನಿಗಳು ಈ ಅನಿಶ್ಚಿತ ಹಣಕಾಸು ಬಿಕ್ಕಟ್ಟಿನ ಕಾಲದಲ್ಲಿ ದಿಗಿಲುಗೊಳಿಸುವ ಗ್ರಾಹಕರನ್ನೇ ಕಾಣುತ್ತಿದೆ. ನಾವು ಸಂಸ್ಥೆಯ ಸಂರಚನೆಯಲ್ಲಿ ಹೊಸದಾಗಿ ಯಾಹೂ ಎಡ್ವರ್ ಟೈಸಿಂಗ್ ತೆರೆದಿದ್ದು, ಅದು ಕಂಪೆನಿಯ ಸ್ವತ್ತುಗಳಾದ ಯಾಹೂ ಫೈನಾನ್ಸ್, ಯಾಹೂ ನ್ಯೂಸ್, ಯಾಹೂ ಸ್ಪೋರ್ಟ್ಸ್ ಗಳಲ್ಲಿ ಮಾರಾಟದ ಜಾಹೀರಾತುಗಳ ಮೇಲೆ ಒತ್ತು ನೀಡಲಿದೆ.
ಕಂಪೆನಿಯು ಈಗಲೂ ಲಾಭದಾಯಕವಾಗಿಯೇ ಇದೆ. ಕಂಪೆನಿಯಲ್ಲಿ ಹೊಸ ವಿಭಾಗ ತೆರೆದು ಅಲ್ಲಿಯ ವ್ಯವಹಾರಕ್ಕೆ ಜಾಗ ಮಾಡಬೇಕಾಗಿರುವುದರಿಂದ ಬೇರೆ ವಿಭಾಗದ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆಯಬೇಕಾಗಿ ಬಂದಿದೆ. ನಾವು ಮಾರುಕಟ್ಟೆಯು ಎತ್ತರದಲ್ಲಿರುವಾಗಲೇ ಇದನ್ನು ಮಾಡುತ್ತಿದ್ದೇವೆ ಎಂದು ಸಹ ಜಿಮ್ ಲಾಂಜೋನ್ ಹೇಳಿದರು.
ಯಾಹೂ ಈಗಲೂ ಹೆಚ್ಚೆಚ್ಚು ಜನರನ್ನು ನೇಮಕಾತಿ ಮಾಡಬೇಕಾಗಿದೆ. ನಮ್ಮ ಕೆಲಸ ಕಳೆದುಕೊಳ್ಳುವವರು ಬೇರೆ ವಿಭಾಗಕ್ಕೆ ಸೂಕ್ತರಾಗಿದ್ದರೆ ಪರಿಗಣಿಸಲಾಗುವುದು ಎಂದೂ ಲಾಂಜೋನ್ ತಿಳಿಸಿದರು.
ಆಕ್ಸಿಯೋಸ್ ಸಿಬ್ಬಂದಿ ಕಡಿತದ ಬಗ್ಗೆ ಮೊದಲೇ ವರದಿ ಮಾಡಿತ್ತು.