ಕೃತಿ ಚೌರ್ಯದ ವರಾಹರೂಪಂ ಬಳಸಬಾರದು ಎಂಬ ಷರತ್ತಿನ ಮೇಲೆ ‘ಕಾಂತಾರ’ ನಿರ್ಮಾಪಕ, ನಿರ್ದೇಶಕರಿಗೆ ಕೇರಳ ಹೈಕೋರ್ಟ್ ಜಾಮೀನು

Prasthutha|

ಕೊಚ್ಚಿ: ಭಾರೀ ಹಣ ಮಾಡಿದ ‘ಕಾಂತಾರ’ ಸಿನಿಮಾದ ನಿರ್ಮಾಪಕ ಮತ್ತು ನಿರ್ದೇಶಕರಾದ ವಿಜಯ ಕಿರಗಂದೂರ್ ಮತ್ತು ರಿಷಬ್ ಶೆಟ್ಟಿಗೆ ಕೇರಳ ಉಚ್ಚ ನ್ಯಾಯಾಲಯವು ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ.

- Advertisement -


ಮಲಯಾಳದ ವರಾಹರೂಪಂ ಹಾಡಿನ ನಕಲು ಮಾಡಿರುವುದು 1956ರ ಕೃತಿಚೌರ್ಯದಡಿ ಅಪರಾಧವಾಗಿದ್ದು, ಅದನ್ನು ಬಳಸದಿರುವಂತೆ ಎಚ್ಚರಿಸಿ ಜಾಮೀನು ನೀಡಿದೆ.
ಜಸ್ಟಿಸ್ ಎ. ಬದ್ರುದ್ದೀನ್ ಜಾಮೀನು ನೀಡುವಾಗ ಷರತ್ತುಗಳನ್ನು ಸಹ ಒತ್ತಿ ಹೇಳಿದರು.


“ಅಂತಿಮ ತೀರ್ಪು ಇಲ್ಲವೇ ಮಧ್ಯಂತರ ತೀರ್ಪು ಬರುವುದಕ್ಕೆ ಮೊದಲು ಅರ್ಜಿದಾರರು ವರಾಹರೂಪಂ ಹಾಡನ್ನು ಚಿತ್ರ ಪ್ರದರ್ಶನದಲ್ಲಿ ಬಳಸಬಾರದು. ಅದು ಕೃತಿಚೌರ್ಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಅದು ಸಿವಿಲ್ ಕೋರ್ಟಿನ ತೀರ್ಪಿನ ಉಲ್ಲಂಘನೆ ಎಂದರೆ ನ್ಯಾಯಾಲಯ ನಿಂದನೆಯೂ ಆಗುತ್ತದೆ. ಕಾಪಿ ರೈಟ್ ಉಲ್ಲಂಘನೆಯಾಗಿರುವುದರಿಂದ ಒಂದು ಅರ್ಹ ತೀರ್ಪು ಸಿಗುವವರೆಗೆ ಅರ್ಜಿದಾರರು ಕಾಯಲೇ ಬೇಕು” ಎಂದು ಜಸ್ಟಿಸ್ ಬದ್ರುದ್ದೀನ್ ಹೇಳಿದರು.

- Advertisement -


ಕೋಝಿಕೋಡ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 703/2022ರಡಿ ಅರ್ಜಿದಾರರ ವಿರುದ್ಧ ಕಾಪಿ ರೈಟ್ ಉಲ್ಲಂಘಿಸಿದ ಮೊಕದ್ದಮೆ ದಾಖಲಾಗಿದೆ. ಮಾತೃಭೂಮಿ ಮುದ್ರಣ ಮತ್ತು ಪ್ರಕಾಶನ ಕಂಪೆನಿಯವರ ಕಪ್ಪ ಟೀವಿಯ ಮಾಲಿಕತ್ವದಲ್ಲಿನ ನವರಸಂ ಹಾಡಿನ ಕೃತಿ ಚೌರ್ಯವಾಗಿದೆ ವರಾಹರೂಪಂ ಹಾಡು ಎಂಬುದು ಅರ್ಜಿದಾರರ ಆರೋಪ. ನವರಸಂ ಹಾಡು ತೈಕುಡಂ ಬ್ರಿಡ್ಜ್ ಬ್ಯಾಂಡ್ ನ ಪ್ರಸಿದ್ಧ ಚಿತ್ರಣ ಗೀತೆಯಾಗಿದೆ. ಮಾತೃಭೂಮಿ ಮತ್ತು ತೈಕುಡಂ ಬ್ರಿಡ್ಜ್ ನವರ ದೂರಿನ ಮೇಲೆ ಎಫ್ ಐಆರ್ ದಾಖಲಾಗಿದೆ.



Join Whatsapp